More

    ಆಸ್ಟ್ರೇಲಿಯಾದ ಮಹಿಳಾ ಬಿಗ್‌ಬ್ಯಾಶ್ ನಲ್ಲಿ ಭಾರತದ ಆಟಗಾರ್ತಿಯರಿಗೆ ಹೆಚ್ಚಿದ ಡಿಮ್ಯಾಂಡ್..!

    ಸಿಡ್ನಿ: ಭಾರತದ ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ ಸೇರಿದಂತೆ ಕೆಲ ಆಟಗಾರ್ತಿಯರಿಗೆ ಮುಂಬರುವ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ (ಡಬ್ಲ್ಯುಬಿಬಿಎಲ್) ಭಾರಿ ಬೇಡಿಕೆ ವ್ಯಕ್ತವಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 14 ರಿಂದ ಆರಂಭವಾಗಲಿರುವ ಲೀಗ್‌ನ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಲಾಯಿತು. ಇದಕ್ಕೂ ಮೊದಲು ಭಾರತ ಮಹಿಳಾ ತಂಡ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಎದುರು 3 ಏಕದಿನ, 3 ಟಿ20 ಹಾಗೂ ಏಕೈಕ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲಿದೆ. ಲೀಗ್ ಆರಂಭಕ್ಕೂ ಮುನ್ನವೇ ಭಾರತದ ಆಟಗಾರ್ತಿಯರು ಆಸ್ಟ್ರೇಲಿಯಾದಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಆಡಲಿದ್ದು, ಇದಕ್ಕೂ ಮುನ್ನ 14 ದಿನಗಳ ಕಾಲ ಕ್ವಾರಂಟೈನ್ ಅವಧಿಯನ್ನು ಪೂರೈಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಆಟಗಾರ್ತಿಯರಿಗೆ ಲೀಗ್ ನಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಯುರೋಕಪ್‌ನಲ್ಲಿ ಸ್ಪೇನ್-ಇಟಲಿಯ ರೋಚಕ ಹಣಾಹಣಿಗೆ ಸಾಕ್ಷಿಯಾದ ಬುಮ್ರಾ ದಂಪತಿ

    17 ವರ್ಷದ ಆಟಗಾರ್ತಿ ಶೆಫಾಲಿ ವರ್ಮ ಹಾಗೂ ಎಡಗೈ ಸ್ಪಿನ್ನರ್ ರಾಧಾ ಯಾಧವ್ ಸಿಡ್ನಿ ಸಿಕ್ಸರ್ ಜತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ, ಸ್ಮತಿ ಮಂದನಾ, ಹರ್ಮಾನ್‌ಪ್ರೀತ್ ಕೌರ್, ದೀಪ್ತಿ ಶರ್ಮ, ಜೇಮಿಮಾ ರೋಡ್ರಿಗಸ್ ಹಾಗೂ ಪೂನಂ ಯಾದವ್‌ಗೂ ಡಬ್ಲ್ಯುಬಿಬಿಎಲ್ ತಂಡಗಳು ಮಣೆಹಾಕುವ ಸಾಧ್ಯತೆಗಳಿವೆ. ಶೆಫಾಲಿ ವರ್ಮ ಎಲ್ಲರ ಆಯ್ಕೆಯಾಗಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿಡ್ನಿ ಸಿಕ್ಸರ್ ಲಿಸ್ಟ್ ಮ್ಯಾನೇಜರ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಲಿಸಾ ಸ್ಥಳೇಕರ್ ತಿಳಿಸಿದ್ದಾರೆ.

    ಇದನ್ನೂ ಓದಿ: 40ನೇ ಜನ್ಮದಿನದಂದು ಎಂಎಸ್ ಧೋನಿ ಹೊಸ ಲುಕ್ ವೈರಲ್!

    ಶೆಫಾಲಿ ಆಸ್ಟ್ರೇಲಿಯಾದ ವಾತಾವರಣದಲ್ಲಿ ಆಡಲು ಇಷ್ಟಪಡುತ್ತಾರೆ. ಟಿ20 ವಿಶ್ವಕಪ್‌ನಲ್ಲಿ ಅವರ ನಿರ್ವಹಣೆ ಗಮನಿಸಿದ್ದೇವೆ. ಪ್ರತಿ ತಂಡದಲ್ಲೂ ಕೆಲವೊಂದು ಸ್ಥಾನಗಳು ಖಾಲಿ ಉಳಿದಿದ್ದು, ಹೀಗಾಗಿ ಭಾರತೀಯ ಆಟಗಾರ್ತಿಯರು ಆ ಸ್ಥಾನ ತುಂಬಲಿದ್ದಾರೆ ಎಂದರು. ಲೀಗ್ ವೇಳೆ ಇಂಗ್ಲೆಂಡ್ ಆಟಗಾರ್ತಿಯರು ಪಾಕಿಸ್ತಾನ ಪ್ರವಾಸದಲ್ಲಿರುವ ಕಾರಣ ಭಾರತದ ಆಟಗಾರ್ತಿಯರಿಗೆ ಬೇಡಿಕೆ ದಕ್ಕಲಿದೆ ಎಂದರು.

    ಐಸಿಸಿ ಮಾಸಿಕ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಆಟಗಾರ್ತಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts