More

    ಯುರೋಕಪ್‌ನಲ್ಲಿ ಸ್ಪೇನ್-ಇಟಲಿಯ ರೋಚಕ ಹಣಾಹಣಿಗೆ ಸಾಕ್ಷಿಯಾದ ಬುಮ್ರಾ ದಂಪತಿ

    ಲಂಡನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ 20 ದಿನಗಳ ಕಾಲ ಬಿಡುವು ನೀಡಲಾಗಿದೆ. ಆಟಗಾರರು ಪ್ರೇಕ್ಷಣಿಯ ಸ್ಥಳಗಳಿಗೆ ಸ್ನೇಹಿತರ ಜತೆ, ಕುಟುಂಬ ಸದಸ್ಯರ ಜತೆಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್‌ನಲ್ಲಿ ಸದ್ಯ ಕ್ರೀಡಾ ಹಬ್ಬದ ಸಮಯ ಅಂತಾನೇ ಹೇಳಬಹುದು. ಪ್ರತಿಷ್ಠಿತ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ನಡೆಯುತ್ತಿದ್ದರೆ, ಮತ್ತೊಂದೆಡೆ ಯುರೋಕಪ್ ಫುಟ್‌ಬಾಲ್ ಟೂರ್ನಿಯೂ ನಡೆಯುತ್ತಿದೆ. ಸದ್ಯ ಬಿಡುವಿನಲ್ಲಿರುವ ಭಾರತೀಯ ಕ್ರಿಕೆಟಿಗರು ಈ ಕ್ರೀಡಾಹಬ್ಬದ ಮಜಾ ಸವಿಯುತ್ತಿದ್ದಾರೆ. ಕೆಲ ಕ್ರಿಕೆಟಿಗರು ಕುಟುಂಬ ಸದಸ್ಯರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರೆ, ಮತ್ತೆ ಕೆಲವರು ಯುರೋಕಪ್ ಪಂದ್ಯಗಳು ಹಾಗೂ ವಿಂಬಲ್ಡನ್ ಟೂರ್ನಿ ವೀಕ್ಷಿಸುತ್ತಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಹಾಗೂ ಅವರ ಪತ್ನಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಇಬ್ಬರು ಮಂಗಳವಾರ ಸ್ಪೇನ್ ಹಾಗೂ ಇಟಲಿ ನಡುವಿನ ಯುರೋಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಿದ್ದಾರೆ.

    ಇದನ್ನೂ ಓದಿ: ವಿಶ್ವ ದಾಖಲೆಗಳ ಸರದಾರ ಭಾರತದ ಈ ಪ್ಯಾರಾಥ್ಲೀಟ್..!,

    ಇಬ್ಬರು ಯುರೋಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸುತ್ತಿರುವ ಫೋಟೋವನ್ನು ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವೆಂಬ್ಲೆ ಸ್ಟೇಡಿಯಂನಲ್ಲಿ ನಡೆದ ಇಟಲಿ ಹಾಗೂ ಸ್ಪೇನ್ ನಡುವಿನ ಸೆಮಿಫೈನಲ್ ಪಂದ್ಯ ಜರುಗಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ತಂಡ 4-2 ರಿಂದ ಸ್ಪೇನ್ ತಂಡವನ್ನು ಸೋಲಿಸಿತು. ನಿಗದಿತ ವೇಳೆಯಲ್ಲಿ ಉಭಯ ತಂಡಗಳು ತಲಾ 1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಪಂದ್ಯ 1-1 ರಿಂದ ಸಮಬಲಗೊಂಡ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಇದರೊಂದಿಗೆ ಇಟಲಿ ತಂಡ ಯುರೋಕಪ್‌ನಲ್ಲಿ ಸತತ 16ನೇ ಜಯ ದಾಖಲಿಸಿತು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಭಾರತದ ಕುಸ್ತಿಪಟುಗೆ ಶಾಕ್.

    ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಕಳೆದ ಮಾರ್ಚ್ ತಿಂಗಳಲ್ಲಿ ವರಿಸಿದ್ದರು. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಆಟಗಾರರಿಗೆ 20 ದಿನಗಳ ಬಿಡುವು ನೀಡಲಾಗಿದ್ದು, ಜುಲೈ 15ರಂದು ಎಲ್ಲ ಆಟಗಾರರು ತಂಡ ಕೂಡಿಕೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts