T20 ಮಹಿಳಾ ವಿಶ್ವಕಪ್​: ಕನ್ನಡತಿ ಶ್ರೇಯಾಂಕಾ ಸ್ಪಿನ್​ ದಾಳಿಗೆ ಪಾಕ್​ ತತ್ತರ! ಪಂದ್ಯ ಗೆದ್ದ ಟೀಮ್ ಇಂಡಿಯಾ

india wins
Published on

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡವನ್ನು ಭಾರತ (Womens Team India) ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. 6 ವಿಕೆಟ್​ಗಳ ಅಂತರದಲ್ಲಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ವನಿತೆಯರಿಗೆ ಇದೀಗ ಕ್ರಿಕೆಟ್ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಟಾಸ್​ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟ್​ ಮಾಡಲು ಅಖಾಡಕ್ಕಿಳಿಯಿತು. ಈ ವೇಳೆ ಬೌಲಿಂಗ್ ದಾಳಿ ನಡೆಸಿದ ಕನ್ನಡತಿ ಶ್ರೇಯಾಂಕಾ ಪಾಟೀಲ್​, 4 ಓವರ್​ಗಳ ಅಂತ್ಯಕ್ಕೆ ಕೇವಲ 12 ರನ್​ಗಳನ್ನು ಕೊಟ್ಟು, ಎರಡು ಮುಖ್ಯ ವಿಕೆಟ್​ ಕಬಳಿಸುವಲ್ಲಿ ಸಫಲರಾದರು. ಪಾಕಿಸ್ತಾನಿ ಬ್ಯಾಟರ್​ಗಳನ್ನು ಬೆಂಬಿಡದೆ ಕಾಡಿದ ಶ್ರೇಯಾಂಕಾ ಮತ್ತು ಅರುಂಧತಿ ರೆಡ್ಡಿ ಈ ರೋಚಕ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 105 ರನ್​ ಕಲೆಹಾಕುವಲ್ಲಿ ಶಕ್ತವಾಯಿತು. ಇನ್ನು ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕ್ಯಾಪ್ಟನ್​ ಹರ್ಮನ್‌ಪ್ರೀತ್ ಕೌರ್ (24 ಎಸೆತಗಳಲ್ಲಿ 29) ​ಮತ್ತು ಶಫಲಿ ವರ್ಮ (35 ಎಸೆತಗಳಲ್ಲಿ 32 ರನ್) ಬ್ಯಾಟಿಂಗ್​ ನೆರವಿನಿಂದ ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net