ಜಸ್ಪ್ರೀತ್​ ಬುಮ್ರಾ ಇಲ್ಲದಿದ್ದರೆ, ಟೆಸ್ಟ್​​ ಸರಣಿ ಆಸ್ಟ್ರೇಲಿಯಾ ಕೈ ವಶವಾಗುತ್ತಿತ್ತು: ಗ್ಲೆನ್​ ಮೆಕ್​ಗ್ರಾತ್​​ | Test series

dk (85)
Published on

ನವದೆಹಲಿ: ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​​ನಲ್ಲಿ(Test series) ಒಂದು ವೇಳೆ ​ಜಸ್ಪ್ರೀತ್​ ಬುಮ್ರಾ ಭಾರತ ಪರ ಸರಿಯಾದ ಪ್ರದರ್ಶನ ತೊರದಿದ್ದರೆ ಸರಣಿ ಆಸ್ಟ್ರೇಲಿಯಾ ಕೈ ವಶವಾಗುತ್ತಿತ್ತು ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್​ ಮೆಕ್​ಗ್ರಾತ್​​ ಹೇಳಿದ್ದಾರೆ.

ಜಸ್ಪ್ರೀತ್​ ಬುಮ್ರಾ ಅದ್ಭುತ ಪ್ರದರ್ಶನದಿಂದ ಆಸ್ಟ್ರೇಲಿಯಾ ಜಯದ ಓಟಕ್ಕೆ ತಡೆಗೊಡೆಯಾಗಿದ್ದರು. ಅವರ ಚೆಂಡಿನ ವೇಗ ಮತ್ತು ನಿಯಂತ್ರಣದ ಬಗ್ಗೆ ಗ್ಲೆನ್​​ ಶ್ಲಾಘಿಸಿದ್ದಾರೆ. ಬುಮ್ರಾ ಅವರು ಭಾರತೀಯ ತಂಡದ ಬೃಹತ್ ಭಾಗವಾಗಿದ್ದಾರೆ ಮತ್ತು ಅವರಿಲ್ಲದಿದ್ದರೆ, ಸರಣಿಯು ಹೆಚ್ಚು ಏಕಪಕ್ಷೀಯವಾಗುತ್ತಿತ್ತು ಎಂದು ಮೆಕ್‌ಗ್ರಾತ್ ತಮ್ಮ ಫೌಂಡೇಶನ್‌ನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಬಳಿಕ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

54 ವರ್ಷ ವಯಸ್ಸಿನ ಗ್ಲೆನ್​​ ಮೆಕ್​ಗ್ರಾತ್ ವಿಶ್ವದ ವೇಗದ ಬೌಲರ್​ಗಳಲ್ಲಿ ಒಬ್ಬರಾಗಿದ್ದರು. 2008 ರಲ್ಲಿ ತಮ್ಮ ಪತ್ನಿ ಜೇನ್ ಅವರನ್ನು ಕಾಯಿಲೆಯಿಂದ ಕಳೆದುಕೊಂಡ ನಂತರ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶುಕ್ರವಾರ ಆರಂಭವಾಗಲಿರುವ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-2 ಹಿನ್ನಡೆಯಲ್ಲಿದೆ. ಬುಮ್ರಾ ಇಲ್ಲಿಯವರೆಗೆ 30 ವಿಕೆಟ್‌ಗಳನ್ನು 20 ಕ್ಕಿಂತ ಕಡಿಮೆ ಸರಾಸರಿಯಲ್ಲಿ 30 ವಿಕೆಟ್‌ಗಳೊಂದಿಗೆ ತಂಡದ ಅತ್ಯುತ್ತಮ ಆಟಗಾರ ಎನಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net