

ನವದೆಹಲಿ: 2024ರ ಡಿ.30ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನ ಕೊನೆಯ ಪಂದ್ಯಲ್ಲಿ ಭಾರತ ತಂಡ 187ರನ್ಗಳಿಂದ ಸೋಲು ಆನುಭವಿಸಿದ ಹಿನ್ನೆಲೆ ಬೇಸಗೊಂಡಿರುವ ಕೋಚ್ ಗಂಭೀರ್(Gambhir) ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರ ವಿರುದ್ಧ ಕಿಡಿ ಕಾರಿದ್ದಾರೆ ಎಂದು ವರದಿಯಾಗಿದೆ.
20.4 ಓವರ್ಗಳಲ್ಲಿ ಹೀನಾಯವಾಗಿ ಸೋತ ಭಾರತ ತೀವ್ರ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಹತಾಶೆಗೊಂಡಿರುವ ಗಂಭೀರ್ ಕೂಡ ಆಟಗಾರರರಿಗೆ 'ಬಹುತ್ ಹೋ ಗಯಾ'(ನನಗೆ ಸಕಾಗಿದೆ) ಎಂದು ಹೇಳುವ ಮೂಲಕ ಮುಂದಿನ ಪಂದ್ಯ ಗೆಲ್ಲಲು ಅಣಿಯಾಗುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಗಂಭೀರ್ ಹೇಳಿಕೆಯಲ್ಲಿ ಯಾವ ಆಟಗಾರರನ್ನು ಹೆಸರಿಸದಿದ್ದರೂ, ಈ ಸಂದೇಶ ತಂಡಕ್ಕೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಗಂಭೀರ್ ಕೂಡ ಕಳೆದ ಜೂ.9ರಂದು ಕೋಚ್ ಹುದ್ದೆಗೆ ಏರಿದ್ದಾರೆ. ಅಲ್ಲಿಂದ ಎಲ್ಲಾ ಆಟಗಾರರಿಗೆ ಸ್ವತಂತ್ರ್ಯ ನೀಡಲಾಗಿದೆ. ಆದರೆ ಆಟಗಾರರು ಮಾತ್ರ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ, ಇದೀಗ ಆಟಗಾರರಿಗ ಕಠಿಣ ಸವಾಲುಗಳನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಸವಾಲುಗಳನ್ನು ಎದಿರಿಸಬೇಕು ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ವಾರ್ನಿಂಗ್ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಸ್ಕಾರ ಟ್ರೋಫಿ ಟೆಸ್ಟ್ನಲ್ಲಿ ಮೊದಲೇ ಪಂದ್ಯ ಗೆದ್ದಿರುವ ಭಾರತ, ಬಳಿಕ ಎರಡನೇ ಪಂದ್ಯ ಆಸ್ಟ್ರೇಲಿಯಾ ಮತ್ತು ಮೂರನೇ ಪಂದ್ಯ ಡ್ರಾ ಆಗಿದ್ದು, ನಾಲ್ಕನೇ ಪಂದ್ಯ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಭಾರತ 187 ರನ್ಗಳ ಹೀನಾಯವಾಗಿ ಸೋತಿದೆ. ಅಲ್ಲದೆ, ಈ ಎಲ್ಲಾ ಪಂದ್ಯಗಳನ್ನು ತಂಡದ ಬಹುತೇಕ ಆಟಗಾರರು ಕೆಳಪೆ ಪ್ರದರ್ಶನ ತೊರುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆ ಗಂಭೀರ್ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಜ.3ರಿಂದ ಸಿಡ್ನಿಯಲ್ಲಿ ನಡೆಯುವ 5ನೇ ಪಂದ್ಯಕ್ಕೆ ಮಾನಸಿಕವಾಗಿ ಸಿದ್ದರಾಗಿ ಎಂದು ಪರೋಕ್ಷವಾಗಿ ಗುಡುಗಿದ್ದಾರೆ. (ಏಜೆನ್ಸೀಸ್).