ನೇತ್ರದಾನದಿಂದ ಜೀವನ ಸಾರ್ಥಕ್ಯ -- ಅಂಧರ ಸೇವಾ ಸಂಘದಿಂದ ಗೌರವ ಸ್ವೀಕರಿಸಿ ಪಾಂಗಾಳ ಗುರುರಾಜ್ ರಾವ್ ಅಭಿಮತ

Oplus_16908288
Oplus_16908288
Published on

ಮಂಗಳೂರು: ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬೂದಿಯಾಗುವ ಬದಲು ನೇತ್ರದಾನದಿಂದ ಅಂಧರಿಗೆ ಬೆಳಕನ್ನು ನೀಡುವ ುೂಲಕ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಪಾಂಗಾಳ ಗುರುರಾಜ್ ರಾವ್ ಹೇಳಿದರು.

ಅಂಧರ ಸೇವಾ ಸಂಘದಿಂದ ಹಾಗೂ ಶಿಷ್ಯ ವರ್ಗದವರಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಉಸಿರು ಶಾಶ್ವತವಲ್ಲ ಹೆಸರು ಮಾತ್ರ ಶಾಶ್ವತ. ನಮ್ಮ ಹೆಸರು ಶಾಶ್ವತವಾಗಬೇಕಾದರೆ ಅಂಗಾಂಗ ದಾನ ಹಾಗೂ ನೇತ್ರ ದಾನ ಮಾಡಬೇಕು. ಮುಂದಿನ ದಿನಗಳಲ್ಲಿ ನೇತ್ರದಾನದ ಕೊರತೆಯಾಗದಂತೆ ಮಾಡಲು ನೇತ್ರದಾನಕ್ಕೆ ನಾವೆಲ್ಲರೂ ನೊಂದಾವಣೆ ಮಾಡಿಸಿಕೊಳ್ಳಬೇಕು ಎಂದರು.

ಸಂಘದ ಕಾರ್ಯದರ್ಶಿ ಪಿ. ರವೀಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಧರ ಸೇವಾ ಸಂಘ 1982ರಲ್ಲಿ ಸ್ಥಾಪಿತವಾಗಿ 43 ವರ್ಷಗಳ ಕಾ ನಿರಂತರವಾಗಿ ಶಿಬಿರಗಳನ್ನು ಏರ್ಪಡಿಸಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಜಾತಿ ಮತ ಭೇದವಿಲ್ಲದೆ ಸಾವಿರಾರು ಮಂದಿಗೆ ದೃಷ್ಠಿಯನ್ನು ನೀಡುವ ಮೂಲಕ ಅವರ ಬದುಕಿಗೆ ಬೆಳಕನ್ನು ಒದಗಿಸಿದ ಸಂಸ್ಥೆ. ಉಚಿತವಾಗಿ ಔಷಧ, ಕನ್ನಡಕ ಹಾಗೂ ಕ್ಯಾಟರಾಕ್ಟ್ ಅಪರೇಷನ್ ನೀಡುತ್ತಾ ಬಂದಿದ್ದೇವೆ. ದಿ.ಪಿ. ಸೇತುಮಾಧವ ರಾವ್ ಹಾಗೂ ಅವರ ಪತ್ನಿ ದಿ.ಸುಮತಿ ಪಾಂಗಾಳ್ ಇವರ ಸೇವಾ ಮನೋಭಾವನೆಯಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ ಎಂದರು.

ಸಂಘದ ಅಧ್ಯಕ್ಷ ವೈ.ಆರ್.ಭಟ್, ಖಜಾಂಚಿ ಎಂ.ವಿ. ಸುಬ್ರಹ್ಮಣ್ಯ ಹಾಗೂ ಇತರ ಸದಸ್ಯರಾದ ಗೀತಾ ಗುರುರಾಜ್ ರಾವ್, ಪಿ. ಸುರೇಂದ್ರರಾವ್, ಮಂಗಳ ಭಟ್, ಶಾಂತಾ ಕುಮಾರ್, ನೀರಜ ಸುಬ್ರಹ್ಮಣ್ಯ, ಸ್ವರ್ಣ ಭಟ್, ಎಸ್.ಟಿ. ಹೆಗ್ಡೆ ಮತು ್ತ ಗೀತಾ ಹೆಗ್ಡೆ , ಶಶಿಧರ್ ಮೊಲಿ,ಗೋವಿಂದರಾಯ ಪ್ರಭು, ಸುರೇಶ್ ವರ್ಕಾಡಿ ಉಪಸ್ಥಿತರಿದ್ದರು.

ಅಂಧರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಬಿ. ಶೋಭಾರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net