

ಸೇಂಟ್ ಜಾನ್ಸ್: ಪ್ರವಾಸಿ ಭಾರತ ತಂಡದ ವಿರುದ್ಧ ಗುರುವಾರದಿಂದ ಬಾರ್ಬಡೋಸ್ನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೆಯರ್ ಮತ್ತು ವೇಗಿ ಒಶಾನೆ ಥಾಮಸ್ ತಂಡಕ್ಕೆ ಪುನರಾಗಮನ ಕಂಡಿದ್ದಾರೆ.
ಮಾಜಿ ನಾಯಕ ನಿಕೋಲಸ್ ಪೂರನ್ ಮತ್ತು ಆಲ್ರೌಂಡರ್ ಜೇಸನ್ ಹೋಲ್ಡರ್ ತಂಡದ ಆಯ್ಕೆಗೆ ಅಲಭ್ಯರಾಗಿದ್ದರೆ, ಆಲ್ರೌಂಡರ್ ಕೀಮೊ ಪೌಲ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೆಟ್ಮೆಯರ್ ಯಾವುದೇ ಕ್ರಿಕೆಟ್ ಪ್ರಕಾರದಲ್ಲಿ ಸುಮಾರು 1 ವರ್ಷದ ಬಳಿಕ ವಿಂಡೀಸ್ ತಂಡಕ್ಕೆ ಮರಳಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿರುವ ಹೆಟ್ಮೆಯರ್ ಪ್ರಸಕ್ತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾಗಿದ್ದಾರೆ.
2021ರ ಜುಲೈನಲ್ಲಿ ಕೊನೆಯದಾಗಿ ಆಸೀಸ್ ವಿರುದ್ಧ ಏಕದಿನ ಪಂದ್ಯ ಆಡಿದ್ದ ಹೆಟ್ಮೆಯರ್, ಇತ್ತೀಚೆಗೆ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಗೂ ಕಡೆಗಣಿಸಲ್ಪಟ್ಟಿದ್ದರು. ಥಾಮಸ್ ಕೂಡ 2021ರ ಡಿಸೆಂಬರ್ ಬಳಿಕ ಮೊದಲ ಬಾರಿ ತಂಡಕ್ಕೆ ಮರಳಿದ್ದಾರೆ. ವಿಶ್ವಕಪ್ ಅರ್ಹತೆ ಸಂಪಾದಿಸಲು ವಿಲವಾದ ಬಳಿಕ ವಿಂಡೀಸ್ ತಂಡಕ್ಕೆ ಇದು ಮೊದಲ ಏಕದಿನ ಸರಣಿಯಾಗಿದೆ.
ತಂಡ: ಶೈ ಹೋಪ್ (ನಾಯಕ), ರೋವ್ಮನ್ ಪೊವೆಲ್ (ಉಪನಾಯಕ), ಅಲಿಕ್ ಅಥನೇಸ್, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರೊನ್ ಹೆಟ್ಮೆಯರ್, ಅಲ್ಜಾರಿ ಜೋಸ್ೆ, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋತಿ, ಜೇಡನ್ ಸೀಲ್ಸ್, ರೊಮಾರಿಯೊ ಶೆರ್ಡ್, ಕೆವಿನ್ ಸಿಂಕ್ಲೇರ್, ಒಶಾನೆ ಥಾಮಸ್.