

ನವದೆಹಲಿ: ದುಬೈನಲ್ಲಿ ನಡೆದ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಯುವ ಹಾಗೂ ಹೊಸ ಆಟಗಾರರನ್ನು ಖರೀದಿ ಮಾಡುವಲ್ಲಿ 10 ತಂಡಗಳ ಮ್ಯಾನೇಜ್ಮೆಂಟ್ ಕೂಡ ಉತ್ತಮ ಪ್ರದರ್ಶನ ತೋರಿದೆ. ಇನ್ನು ಉಳಿದಿರುವುದು ಕೇವಲ ಐಪಿಎಲ್ ಪಂದ್ಯಗಳ ಆರಂಭವಷ್ಟೇ. ಈ ದಿನಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳು, ತಮ್ಮ ನೆಚ್ಚಿನ ಫ್ರಾಂಚೈಸಿಗಳಿಗೆ ಸೇರಿಕೊಂಡಿರುವ ಹೊಸಬರ ಆಟದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಾಲಿನಲ್ಲಿ ಬ್ಯಾಟರ್ಗಳ ಮೇಲೆಯೇ ಭಾರೀ ನಿರೀಕ್ಷೆ.
ಐಪಿಎಲ್ ಅಂದಾಗ ಅಲ್ಲಿ ವಿಕೆಟ್ ಕಬಳಿಸುವ ಬೌಲರ್ಗಳ ಎಸೆತಗಳನ್ನು ನೋಡುವುದು ಎಷ್ಟು ಖುಷಿಯೋ, ಅದಕ್ಕಿಂತ ದುಪ್ಪಟ್ಟಿನ ಸಂತಸ, ಹಬ್ಬ ಉಂಟಾಗುವುದು ಬ್ಯಾಟರ್ಗಳ ಅಬ್ಬರದ ಬ್ಯಾಟಿಂಗ್ ಕಂಡಾಗ. ಮೈದಾನದ ತುಂಬ ರನ್ಗಳ ಹೊಳೆಯನ್ನು ಹರಿಸಿ, ಸ್ಟೇಡಿಯಂ ತುಂಬಿರುವ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವುದು ಸ್ಟಾರ್ ಬ್ಯಾಟರ್ಗಳ ಸ್ಫೋಟಕ ಬ್ಯಾಟಿಂಗ್. ಟಿ20 ಫಾರ್ಮೆಟ್ ಆಗಿರುವ ಐಪಿಎಲ್ನಲ್ಲಿ ಸಖತ್ ಸ್ಟೈಲಿಶ್ ಆಗಿ ರನ್‌ಗಳನ್ನು ಹಾಗೂ ಕ್ರಿಕೆಟ್ ಪ್ರಿಯರ ಅಪಾರ ಮೆಚ್ಚುಗೆಯನ್ನು ಗಳಿಸಿರುವುದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ 'ರನ್ ಮಷಿನ್' ವಿರಾಟ್ ಕೊಹ್ಲಿ.
ಇಂಡಿಯನ್ ಪ್ರಿಯರ್ ಲೀಗ್ನಲ್ಲಿ ಇತರೆ ಬ್ಯಾಟರ್ಗಳಿಗೆ ಹೋಲಿಸಿದರೆ ವಿರಾಟ್ ಕೊಹ್ಲಿ ಅವರ ರನ್ ದಾಖಲೆ ಸದಾ ಒಂದು ಹೆಜ್ಜೆ ಮುಂದೆ. ಕೆಲವರು ಒಂದು ಸೀಸನ್ ಆಡಿದರೆ, ಮತ್ತೊಂದು ಆವೃತ್ತಿಯಲ್ಲಿ ಅಬ್ಬರಿಸಲು ವಿಫಲರಾಗುತ್ತಾರೆ. ಆದರೆ, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ವಿರಾಟ್, ಮೈದಾನಕ್ಕೆ ಬಂದರೆ ಸಾಕು ರನ್ಗಳ ಹೊಳೆಯನ್ನೇ ಹರಿಸುತ್ತಾರೆ. 2008ರಿಂದಲೂ ಅದ್ಭುತ ಬ್ಯಾಟಿಂಗ್ ಮೂಲಕ ಅಧಿಕ ರನ್ ಕಲೆಹಾಕುವ ವಿರಾಟ್, 2016ರ ಐಪಿಎಲ್ನಲ್ಲಿ ಬರೋಬ್ಬರಿ 973 ರನ್‌ಗಳನ್ನು ಕೇವಲ ಒಂದೇ ಒಂದು ಸೀಸನ್ನಲ್ಲಿ ದಾಖಲಿಸಿದರು. ಇಂದಿಗೂ ಅವರ ಈ ದಾಖಲೆಯನ್ನು ಮುರಿಯುವಲ್ಲಿ ಯಾರಿಂದಲೂ ಸಾಧ್ಯವಾಗಿಲ್ಲ.
2016ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 973 ರನ್ ಗಳಿಸಿದ ವಿರಾಟ್, ಇಂದಿಗೂ ಮೈದಾನಕ್ಕೆ ಬಂದರೆ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ. ಅಂದು ವಿರಾಟ್ ಕಲೆಹಾಕಿದ 973 ಅತ್ಯಧಿಕ ರನ್ ದಾಖಲೆಯನ್ನು ಇಲ್ಲಿಯವರೆಗೂ ಯಾವ ಐಪಿಎಲ್ ಫ್ರಾಂಚೈಸಿಯ ಬ್ಯಾಟರ್ ಕೂಡ ಮುರಿಯುವಲ್ಲಿ ಯಶಸ್ವಿಯಾಗಿಲ್ಲ. ಇನ್ನು ಐಪಿಎಲ್ 2025ರ ಮುನ್ನೋಟ ಈಗಾಗಲೇ ಸಿಕ್ಕಿದ್ದೇ ತಡ ಹಲವು ನಿರೀಕ್ಷೆ, ಭವಿಷ್ಯವಾಣಿಗಳು ವ್ಯಕ್ತವಾಗುತ್ತಿವೆ. ಈ ಪೈಕಿ ವಿರಾಟ್ ದಾಖಲೆಯನ್ನು ಸಿಎಸ್ಕೆಯ ಈ ಮೂವರು ಬ್ಯಾಟ್ಸ್ಮನ್ಗಳು ಬ್ರೇಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ. ಅಸಲಿಗೆ ಇವರಿಂದ ಸಾಧ್ಯವಿದೆಯೇ? ಅಥವಾ ಬೇರೆ ಯಾರಾದರೂ ಮುರಿಯಬಹುದೇ ಎಂಬುದನ್ನು ಕಾಡು ನೋಡಬೇಕು.
1. ರುತುರಾಜ್ ಗಾಯಕ್ವಾಡ್
2. ಡೇವಾನ್ ಕಾನ್ವೇ
3. ರಚಿನ್ ರವೀಂದ್ರ