

ನವದೆಹಲಿ: ದುಬೈನಲ್ಲಿ ನಡೆದ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಯುವ ಹಾಗೂ ಹೊಸ ಆಟಗಾರರನ್ನು ಖರೀದಿ ಮಾಡುವಲ್ಲಿ 10 ತಂಡಗಳ ಮ್ಯಾನೇಜ್ಮೆಂಟ್ ಕೂಡ ಉತ್ತಮ ಪ್ರದರ್ಶನ ತೋರಿದೆ. ಮೊದಲ ದಿನದಂತೆಯೇ ಎರಡನೇ ದಿನದ ಬಿಡ್ಡಿಂಗ್ನಲ್ಲಿಯೂ ತಮ್ಮ ಭರ್ಜರಿ ಪೈಪೋಟಿ ತೋರಿದ ಫ್ರಾಂಚೈಸಿಗಳು ಆಲ್ರೌಂಡರ್, ಬೌಲರ್ ಮತ್ತು ಸ್ಫೋಟಕ ಬ್ಯಾಟರ್ಗಳನ್ನು (Orange Cap) ಖರೀದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ನಿರೀಕ್ಷಿತ ಆಟಗಾರರನ್ನು ಖರೀದಿ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಭರ್ಜರಿ ಬಿಡ್ಡಿಂಗ್ ಮುಗಿದಿದ್ದೇ ತಡ ತಮ್ಮ ತಂಡದ ಕ್ಯಾಪ್ಟನ್ಗಳನ್ನು ಸ್ಥಂಭವಾಗಿ ನಿಲ್ಲಿಸಲು ಎದುರುನೋಡುತ್ತಿರುವ ಫ್ರಾಂಚೈಸಿಗಳು, ಐಪಿಎಲ್ 2025ರ ಟ್ರೋಫಿ ತಮ್ಮದಾಗಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಐಪಿಎಲ್ ಎಂಬ ಪದ ಕೇಳಿದಾಗ ಅಲ್ಲಿ ಟ್ರೋಫಿ ಗೆಲ್ಲುವುದು ಎಷ್ಟು ಮುಖ್ಯವೋ, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲುವುದು ಅಷ್ಟೇ ಮುಖ್ಯ. ಕಳೆದ ಬಾರಿ 17ನೇ ಆವೃತ್ತಿಯ ಕೊನೆಯವರೆಗೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಅತ್ಯಧಿಕ ರನ್ ಗಳಿಸಿ, ಆರೆಂಜ್ ಕ್ಯಾಪ್ಗೆ ಪಾತ್ರರಾದರು. ಇದು ಕೇವಲ ಆರ್ಸಿಬಿ ಅಭಿಮಾನಿಗಳು ಮಾತ್ರವಲ್ಲದೇ ಇತರೆ ತಂಡದ ಫ್ಯಾನ್ಸ್ಗಳ ಮೆಚ್ಚುಗೆಯನ್ನು ಗಳಿಸಿತು. ಸದ್ಯ ಈ ಬಾರಿಯ ಆರೆಂಜ್ ಕ್ಯಾಪ್ನತ್ತ ಸ್ಟಾರ್ ಬ್ಯಾಟರ್ಗಳ ಚಿತ್ತ ಮೂಡಿದ್ದು, ಯಾರೆಲ್ಲಾ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದರ ಪಟ್ಟಿ ಹೀಗಿದೆ ನೋಡಿ.
1. ವಿರಾಟ್ ಕೊಹ್ಲಿ
2. ಡೆವೊನ್ ಕಾನ್ವೇ
3. ರಿಷಭ್ ಪಂತ್
4. ರುತುರಾಜ್ ಗಾಯಕ್ವಾಡ್
5, ಫಿಲ್ ಸಾಲ್ಟ್
6. ರಚಿನ್ ರವೀಂದ್ರ
7. ವೆಂಕಟೇಶ್ ಅಯ್ಯರ್
ಇದನ್ನೂ ಓದಿ: ಭಗವಾನ್ ಶ್ರೀಸತ್ಯಸಾಯಿ ಬಾಬಾ ಜನ್ಮದಿನ ಆಚರಣೆ
8. ರೋಹಿತ್ ಶರ್ಮ
9. ಸೂರ್ಯಕುಮಾರ್ ಯಾದವ್
10. ಟ್ರಾವಿಸ್ ಹೆಡ್
12. ಹೆನ್ರಿಕ್ ಕ್ಲಾಸೆನ್
13. ಸುನಿಲ್ ನರೈನ್
14. ಕೆ.ಎಲ್. ರಾಹುಲ್