3ಟಿ ಕ್ರಿಕೆಟ್ ಪಂದ್ಯ ಭಾರತದಲ್ಲೂ ನೇರಪ್ರಸಾರ, ಎಷ್ಟೊತ್ತಿಗೆ ಆರಂಭ ಗೊತ್ತೇ?

3TC
Published on

ಬೆಂಗಳೂರು: ಇಂಗ್ಲೆಂಡ್ ಬಳಿಕ ದಕ್ಷಿಣ ಆಫ್ರಿಕಾದಲ್ಲೂ ಕ್ರಿಕೆಟ್ ಚಟುವಟಿಕೆ ಆರಂಭವಾಗುತ್ತಿದ್ದು, ಒಂದೇ ಪಂದ್ಯದಲ್ಲಿ ಮೂರು ತಂಡಗಳು ಆಡುವ ವಿನೂತನ 3ಟಿ ಕ್ರಿಕೆಟ್ ಮೂಲಕ ಶನಿವಾರ ಚಾಲನೆ ಸಿಗಲಿದೆ. ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಪಂದ್ಯದ ಬಗ್ಗೆ ಕ್ರಿಕೆಟ್ ಪ್ರೇಮಿಗಳಲ್ಲಿ ಈಗಾಗಲೆ ಭಾರಿ ಕುತೂಹಲ ಹರಡಿದ್ದು, ಭಾರತದಲ್ಲೂ ಈ ಪಂದ್ಯ ನೇರಪ್ರಸಾರ ಕಾಣಲಿದೆ. ಬರೀ ಹೈಲೈಟ್ಸ್​ ಮತ್ತು ಇಂಗ್ಲೆಂಡ್-ವೆಸ್ಟ್​ ಇಂಡೀಸ್​ ಟೆಸ್ಟ್​ ಪಂದ್ಯವನ್ನು ನೋಡಿ ಬೋರಾಗುತ್ತಿದ್ದರೆ, ಕ್ರಿಕೆಟ್​ ಪ್ರೇಮಿಗಳು ಈ ಹೊಸ ನಿಯಮಾವಳಿಗಳ ಕ್ರಿಕೆಟ್​ ಆಟವನ್ನು ಆನಂದಿಸಬಹುದಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪಂದ್ಯ ಭಾರತದಲ್ಲಿ ಮಧ್ಯಾಹ್ನ 2.30ರಿಂದ ನೇರಪ್ರಸಾರ ಕಾಣಲಿದೆ. ಒಟ್ಟಾರೆ 36 ಓವರ್‌ಗಳ ಈ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ನೇರಪ್ರಸಾರ ಮಾಡಲಿದೆ. ಐಪಿಎಲ್ ಸ್ಟಾರ್‌ಗಳಾಗಿರುವ ಆರ್‌ಸಿಬಿಯ ಎಬಿ ಡಿವಿಲಿಯರ್ಸ್‌, ಮುಂಬೈ ಇಂಡಿಯನ್ಸ್‌ನ ಕ್ವಿಂಟನ್ ಡಿಕಾಕ್, ಚೆನ್ನೈ ಸೂಪರ್‌ಕಿಂಗ್ಸ್‌ನ ಫಾಫ್​ ಡು ಪ್ಲೆಸಿಸ್, ಹೆನ್ರಿಕ್ ಕ್ಲಾಸೆನ್, ಲುಂಗಿ ಎನ್‌ಗಿಡಿ, ಡೇವಿಡ್ ಮಿಲ್ಲರ್ ಮುಂತಾದ ಆಟಗಾರರು ಈ ಪಂದ್ಯದಲ್ಲಿ ಆಡಲಿದ್ದು, ಭಾರಿ ರನ್‌ಮಳೆಯ ನಿರೀಕ್ಷೆ ಇದೆ.

3ಟಿಸಿ ಸಾಲಿಡಾರಿಟಿ ಕಪ್:

ಯಾವಾಗ: ಜುಲೈ 18, ಶನಿವಾರ

ಸ್ಥಳ: ಸೂಪರ್ ಸ್ಪೋರ್ಟ್ಸ್ ಪಾರ್ಕ್

ತಂಡಗಳು: ಕ್ಲಾಸೆನ್ಸ್ ಕಿಂಗ್‌ಫಿಷರ್ಸ್‌, ಕ್ವಿನ್ನಿಸ್ ಕೈಟ್ಸ್, ಎಬಿಸ್ ಈಗಲ್ಸ್,

ಆರಂಭ: ಮಧ್ಯಾಹ್ನ 2.30 (ಭಾರತೀಯ ಕಾಲಮಾನ).

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಫಸ್ಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net