More

    3ಟಿ ಕ್ರಿಕೆಟ್​ಗೆ ಮುಹೂರ್ತ ಫಿಕ್ಸ್​, 3 ತಂಡಗಳು ಆಡುವ ಪಂದ್ಯದ ನಿಯಮಗಳೇನು ಗೊತ್ತೇ?

    ಜೊಹಾನ್ಸ್‌ಬರ್ಗ್: ಕರೊನಾ ಹಾವಳಿ ನಡುವೆ ಕ್ರಿಕೆಟ್​ ಪುನರಾರಂಭಕ್ಕೆ ದಕ್ಷಿಣ ಆಫ್ರಿಕಾದಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೆ ಹೊಸ ಆವಿಷ್ಕಾರದ 3ಟಿ ಕ್ರಿಕೆಟ್​ ಪಂದ್ಯದ ಬಗ್ಗೆ ಘೋಷಣೆ ಮಾಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ, ಈ ಪಂದ್ಯಕ್ಕೆ ದಿನಾಂಕವನ್ನೂ ನಿಗದಿಪಡಿಸಿದೆ. ಒಂದೇ ಪಂದ್ಯದಲ್ಲಿ 3 ತಂಡಗಳು ಆಡುವ ವಿಶೇಷತೆಯ ಈ ಪ್ರಯೋಗ, ನೆಲ್ಸನ್​ ಮಂಡೇಲಾ ಅಂತಾರಾಷ್ಟ್ರೀಯ ದಿನವಾದ ಜುಲೈ 18ರಂದು ಸೆಂಚುರಿಯನ್​ನ ಸೂಪರ್​ ಸ್ಪೋರ್ಟ್ಸ್ ಪಾಕ್​ನಲ್ಲಿ ನಡೆಯಲಿದೆ. ಸಾಲಿಡಾರಿಟಿ ಕಪ್​ ಹೆಸರಿನ ಈ ಪಂದ್ಯ ಟಿವಿಯಲ್ಲಿ ನೇರಪ್ರಸಾರ ಕಾಣಲಿದ್ದು, ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ.

    ಇದನ್ನೂ ಓದಿ: ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಟ್ಟಿದ್ದ ಪಾಕ್​ ಸ್ಪಿನ್​ ಮಾಂತ್ರಿಕ ಸಕ್ಲೇನ್​ ಮುಸ್ತಾಕ್​

    ನಿಯಮಗಳೇನು ಗೊತ್ತೇ?

    3ಟಿ ಕ್ರಿಕೆಟ್ ಪಂದ್ಯದಲ್ಲಿ ಪ್ರತಿ ತಂಡದಲ್ಲೂ ತಲಾ 8 ಆಟಗಾರರು ಇರುತ್ತಾರೆ. ಒಟ್ಟು 36 ಓವರ್‌ಗಳ ಪಂದ್ಯವನ್ನು ತಲಾ 18 ಓವರ್‌ಗಳಂತೆ 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಮೊದಲಾರ್ಧದಲ್ಲಿ ಪ್ರತಿ ತಂಡ ತಲಾ 6 ಓವರ್ ಬ್ಯಾಟಿಂಗ್ ಮಾಡಲಿದೆ. ಈ 6 ಓವರ್‌ಗಳಲ್ಲಿ ಭಿನ್ನ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಮೊದಲು ಯಾವ ತಂಡ ಬ್ಯಾಟಿಂಗ್ ಮಾಡಲಿದೆ ಎಂಬುದನ್ನು ಡ್ರಾ ಮೂಲಕ ನಿರ್ಧರಿಸಲಾಗುವುದು. ಅದಕ್ಕೆ ತಕ್ಕಂತೆ ಆವರ್ತನ ಪದ್ಧತಿಯಲ್ಲಿ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಬ್ಯಾಟಿಂಗ್-ಬೌಲಿಂಗ್ ಮಾಡದ ಅವಧಿಯಲ್ಲಿ ತಂಡ ಡಗ್‌ಔಟ್‌ನಲ್ಲಿ ವಿಶ್ರಾಂತಿ ಪಡೆಯಲಿದೆ.

    ಪಂದ್ಯದ ದ್ವಿತೀಯಾರ್ಧದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡವನ್ನು, ಮೊದಲಾರ್ಧದಲ್ಲಿ ಗರಿಷ್ಠ ಸ್ಕೋರ್ ಮಾಡಿದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ತಂಡವೊಂದು 7 ವಿಕೆಟ್ ಕಳೆದುಕೊಂಡರೆ, ಕೊನೆಯ ಬ್ಯಾಟ್ಸ್‌ಮನ್ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದಾಗಿರುತ್ತದೆ. ಆದರೆ ಆತ ಸಮಸಂಖ್ಯೆಯ ರನ್‌ಗಳನ್ನಷ್ಟೇ ಅಂದರೆ, 2 ರನ್, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಮಾತ್ರ ಗಳಿಸಬಹುದು. ಅತಿ ಹೆಚ್ಚು ರನ್ ಗಳಿಸಿ ಗೆಲುವು ದಾಖಲಿಸುವ ತಂಡ ಸ್ವರ್ಣ ಪಡೆದರೆ, ಮತ್ತೆರಡು ತಂಡಗಳು ಬೆಳ್ಳಿ ಮತ್ತು ಕಂಚಿಗೆ ತೃಪ್ತಿಪಡಲಿವೆ.

    ಇದನ್ನೂ ಓದಿ: ಲಿಯೋನೆಲ್​ ಮೆಸ್ಸಿ 700 ಗೋಲುಗಳ ಸರದಾರ, ಯಾರ ದಾಖಲೆ ಮುರಿದರು ಗೊತ್ತೇ?

    ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ತೆರವಾದ ನಂತರದಲ್ಲಿ ನಡೆಯಲಿರುವ ಮೊದಲ ಕ್ರಿಕೆಟ್ ಪಂದ್ಯ ಇದಾಗಿದೆ. ಈಗಲ್ಸ್, ಕಿಂಗ್‌ಫಿಷರ್ಸ್‌ ಮತ್ತು ಕೈಟ್ಸ್ ತಂಡಗಳನ್ನು ಕ್ರಮವಾಗಿ ಎಬಿ ಡಿವಿಲಿಯರ್ಸ್‌, ಕಗಿಸೋ ರಬಾಡ ಮತ್ತು ಕ್ವಿಂಟನ್ ಡಿ ಕಾಕ್ ತಂಡಗಳನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಮುಖ 24 ಆಟಗಾರರು ಈ ಏಕೈಕ ಪಂದ್ಯದಲ್ಲಿ ಆಡಲಿದ್ದಾರೆ. ಈ ಮುನ್ನ ಜೂನ್ 27ರಂದು ಈ ಪಂದ್ಯ ನಿಗದಿಯಾಗಿದ್ದರೂ, ದಕ್ಷಿಣ ಆಫ್ರಿಕಾ ಕ್ರೀಡಾ ಸಚಿವರ ಒಪ್ಪಿಗೆ ಸಿಗದ ಕಾರಣ ಮುಂದೂಡಲ್ಪಟ್ಟಿತ್ತು.

    ಇದನ್ನೂ ಓದಿ: VIDEO| ಬರ್ತ್​ಡೇ ಪಾರ್ಟಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡ ವಿಂಡೀಸ್​ ಕ್ರಿಕೆಟಿಗರು

    ಮಾರ್ಚ್‌ನಲ್ಲಿ ಭಾರತ ಪ್ರವಾಸ ಮೊಟಕುಗೊಂಡು ತವರಿಗೆ ಮರಳಿದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ತರಬೇತಿಯಲ್ಲಿ ಪಾಲ್ಗೊಂಡಿರಲಿಲ್ಲ. ಇತ್ತೀಚೆಗಷ್ಟೇ ದೇಶದ ಪ್ರಮುಖ 44 ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದರು. ಇದೀಗ ಈ ಪಂದ್ಯದ ಮೂಲಕ ಆಟಗಾರರಿಗೆ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಅವಕಾಶ ಲಭಿಸಲಿದೆ.

    PHOTOS | ಭಾರತದ ಕ್ರೀಡಾ ದಂಪತಿ ಸಾಲಿಗೆ ದೀಪಿಕಾ-ಅತನು, ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts