More

    VIDEO| ಬರ್ತ್​ಡೇ ಪಾರ್ಟಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡ ವಿಂಡೀಸ್​ ಕ್ರಿಕೆಟಿಗರು

    ಲಂಡನ್​: ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡ ಈಗಾಗಲೆ ಕರೊನಾ ಹಾವಳಿಯ ನಡುವೆಯೂ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದೆ. ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಈ ಸರಣಿಗೆ ಮುನ್ನ ವಿಂಡೀಸ್​ ಆಟಗಾರರು ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ವೇಗದ ಬೌಲರ್​ ಕೆಮಾರ್​ ರೋಚ್​ ಜನ್ಮದಿನದ ಸಂಭ್ರಮಾಚರಣೆಯ ವೇಳೆಯೂ ಸಹ-ಆಟಗಾರರು ಮತ್ತು ತಂಡದ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಇದಕ್ಕೆ ಸಾಕ್ಷಿ.

    ಇದನ್ನೂ ಓದಿ: PHOTOS | ಭಾರತದ ಕ್ರೀಡಾ ದಂಪತಿ ಸಾಲಿಗೆ ದೀಪಿಕಾ-ಅತನು, ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?

    ಹೆಚ್ಚಿನ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿ ಮೆರೆಯಲಾಗುತ್ತಿದೆ. ಆದರೆ ವಿಂಡೀಸ್​ ಕ್ರಿಕೆಟಿಗರ ನಡೆ ಎಲ್ಲರಿಗೂ ಮಾದರಿಯಾಗಿದೆ. ರೋಚ್​ ಬರ್ತ್​ಡೇ ಪಾರ್ಟಿಯ ವಿಡಿಯೋವನ್ನು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಯ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಲಾಗಿದ್ದು, ಇದರಲ್ಲಿ ಆಟಗಾರರು ಸಾಮಾಜಿಕ ಅಂತರ ಕಾಯ್ದುಕೊಂಡು ರೋಚ್​ಗೆ ಶುಭಾಶಯ ಹೇಳಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಕೂಡ ವೈರಲ್​ ಆಗಿದೆ.

    ಇದನ್ನೂ ಓದಿ: ಲಿಯೋನೆಲ್​ ಮೆಸ್ಸಿ 700 ಗೋಲುಗಳ ಸರದಾರ, ಯಾರ ದಾಖಲೆ ಮುರಿದರು ಗೊತ್ತೇ?

    ಜೂನ್​ 9ರಂದೇ ಇಂಗ್ಲೆಂಡ್​ಗೆ ಆಗಮಿಸಿರುವ ವಿಂಡೀಸ್​ ಕ್ರಿಕೆಟಿಗರು, ಜುಲೈ 8ರಿಂದ ಆತಿಥೇಯರ ಎದುರು 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಡಲಿದ್ದಾರೆ. ವಿಂಡೀಸ್​ ತಂಡದ 30 ಆಟಗಾರರ ನಡುವೆ 2 ತಂಡಗಳನ್ನು ರಚಿಸಿ ಈಗಾಗಲೆ ತ್ರಿದಿನ ಅಭ್ಯಾಸ ಪಂದ್ಯವನ್ನೂ ಆಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts