More

    ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಟ್ಟಿದ್ದ ಪಾಕ್​ ಸ್ಪಿನ್​ ಮಾಂತ್ರಿಕ ಸಕ್ಲೇನ್​ ಮುಸ್ತಾಕ್​

    ನವದೆಹಲಿ: ಸಕ್ಲೇನ್​ ಮುಸ್ತಾಕ್​ ಎಂದ ಕೂಡಲೇ ಪಾಕಿಸ್ತಾನದ ಸ್ಪಿನ್​ ಮಾಂತ್ರಿಕ, ದೂಸ್ರಾ ಎಸೆತವನ್ನು ಮೊದಲಿಗೆ ಪ್ರಯೋಗಿಸಿದ ಆಟಗಾರನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಇವರು ಬೌಲಿಂಗ್​ ಮಾಡಲು ಬಂದರೆಂದರೆ ಬ್ಯಾಟ್ಸ್​ಮನ್​ ತುಸು ಹೆಚ್ಚು ಎಚ್ಚರಿಕೆಯಿಂದ ಆಡುತ್ತಿದ್ದರು. ಇವರ ವಂಚಕ ದೂಸ್ರಾ ಎಸೆತದ ಪರಿಣಾಮ ಇದಾಗಿತ್ತು. ಇಂಥ ಮಹಾಮಹಿಮ ಬೌಲರ್​ ಒಮ್ಮೆ ತಮ್ಮ ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಡುವ ಅನಿವಾರ್ಯತೆ ಒಳಗಾಗಿದ್ದರು.

    ಹೌದು. ರೌನಕ್​ ಕಪೂರ್​ ಅವರ ಬಿಯಾಂಡ್​ ದಿ ಫೀಲ್ಡ್​ ಶೋಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಸಕ್ಲೇನ್ ಮುಸ್ತಾಕ್​ ಬಹಿರಂಗಪಡಿಸಿದ್ದಾರೆ.
    ಅದು 1999 ವಿಶ್ವಕಪ್​ ಕ್ರಿಕೆಟ್​ ಟೂರ್ನಿ. ಇಂಗ್ಲೆಂಡ್​ ಇದರ ಆಥಿತ್ಯ ವಹಿಸಿಕೊಂಡಿತ್ತು. ಟೂರ್ನಿಯ ಆರಂಭದಲ್ಲಿ ಪತ್ನಿಯರನ್ನು ಹೋಟೆಲ್​ ಕೋಣೆಯಲ್ಲಿ ಉಳಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಅವಕಾಶ ಮಾಡಿಕೊಟ್ಟಿತ್ತು. ಹಾಗಾಗಿ 1998ರ ಡಿಸೆಂಬರ್​ನಲ್ಲಿ ನಿಖಾ ಮಾಡಿಕೊಂಡಿದ್ದ ಸಕ್ಲೇನ್​ ಮುಸ್ತಾಕ್ ತಮ್ಮೊಂದಿಗೆ ಪತ್ನಿಯನ್ನೂ ಕರೆದುಕೊಂಡು ಬಂದಿದ್ದರು.

    ಬೆಳಗ್ಗೆಯಿಂದ ಸಂಜೆಯವರೆಗೂ ವೃತ್ತಿಪರ ಆಟಗಾರನಾಗಿ ಏನೆಲ್ಲ, ಎಷ್ಟೆಲ್ಲ ಅಭ್ಯಾಸ, ವ್ಯಾಯಾಮ ಮಾಡಬೇಕೋ ಅಷ್ಟೆಲ್ಲಾ ಮಾಡುತ್ತಿದ್ದೆ. ರಾತ್ರಿಯಾಗುತ್ತಲೇ ಹೋಟೆಲ್​ ಕೋಣೆಗೆ ಹಿಂದಿರುಗಿ ಸಾಮಾನ್ಯರಂತೆ ಪತ್ನಿಯೊಂದಿಗೆ ಕಾಲಕಳೆಯುತ್ತಿದ್ದೆ ಎಂದು ಸಕ್ಲೇನ್​ ಮುಸ್ತಾಕ್​ ಹೇಳಿಕೊಂಡಿದ್ದಾರೆ.
    ಪತ್ನಿಯರನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಪಿಸಿಬಿ ದಿಢೀರನೆ ತನ್ನ ನಿಲುವು ಬದಲಿಸಿ, ಪತ್ನಿಯರನ್ನು ಮನೆಗೆ ಕಳುಹಿಸುವಂತೆ ತನ್ನೆಲ್ಲ ಆಟಗಾರರಿಗೆ ಸೂಚಿಸಿತ್ತು. ಈ ವಿಷಯ ಕಿವಿಗೆ ಬೀಳುತ್ತಲೇ ನವವಿವಾಹಿತ ಸಕ್ಲೇನ್​ ಮುಸ್ತಾಕ್​ಗೆ ಸಿಟ್ಟು ಬಂದಿತು.

    ಇದನ್ನೂ ಓದಿ: ಲಿಯೋನೆಲ್​ ಮೆಸ್ಸಿ 700 ಗೋಲುಗಳ ಸರದಾರ, ಯಾರ ದಾಖಲೆ ಮುರಿದರು ಗೊತ್ತೇ?

    ಈ ಹಿನ್ನೆಲೆಯಲ್ಲಿ ಕೋಚ್​ ರಿಚರ್ಡ್​ ಪೈಬಸ್​ ಬಳಿಗೆ ಹೋದ ಅವರು ಟೂರ್ನಿಯ ಮಧ್ಯಭಾಗದಲ್ಲಿ ಏಕೆ ಇಂಥ ನಿರ್ಧಾರ ಎಂದು ಪ್ರಶ್ನಿಸಿದರು. ಅವರಿಂದ ಸಮಂಜಸ ಉತ್ತರ ದೊರೆಯಲಿಲ್ಲ. ಆದರೆ, ತಾವು ಮಾಡಿಕೊಂಡಿರುವ ವ್ಯವಸ್ಥೆಯಲ್ಲಿ ಒಂದಿಷ್ಟೂ ಬದಲಾವಣೆ ಮಾಡಿಕೊಳ್ಳಲು ಬಯಸದ ಸಕ್ಲೇನ್, ಪತ್ನಿಯನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ನಿರ್ಧರಿಸಿದರು.

    ಪತ್ನಿಯರನ್ನು ಮನೆಗೆ ಕಳುಹಿಸಿದ್ದಾರೋ ಇಲ್ಲವೋ ಎಂದು ಪಿಸಿಬಿ ಅಧಿಕಾರಿಗಳು ಪ್ರತಿದಿನವೂ ಆಟಗಾರರ ಕೋಣೆಗಳಿಗೆ ಬಂದು ಪರಿಶೀಲಿಸುತ್ತಿದ್ದರು. ಅದರಂತೆ ನನ್ನ ಕೋಣೆಯ ತಪಾಸಣೆಗೆ ಬಂದಾಗ ನಾನು ನನ್ನ ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಡುತ್ತಿದ್ದೆ ಎಂದು ತಿಳಿಸಿದ್ದಾರೆ.

    ಹೀಗೆ ಒಂದು ದಿನ ಮ್ಯಾನೇಜರ್​ ನನ್ನ ಕೋಣೆಗೆ ಬಂದಾಗ ಪತ್ನಿಯನ್ನು ಕಬೋರ್ಡ್​ನಲ್ಲಿ ಬಚ್ಚಿಟ್ಟಿದೆ. ಇವರ ಬೆನ್ನಲ್ಲೇ ಪಿಸಿಬಿಯ ಮತ್ತೊಬ್ಬ ಅಧಿಕಾರಿ ಪರಿಶೀಲನೆಗೆ ಬಂದಾಗಲೂ ಆಕೆ ಕಬೋರ್ಡ್​ನಲ್ಲೇ ಇದ್ದಳು. ಇವರಿಬ್ಬರೂ ಬಂದು ಹೋದ ಬಳಿಕ ಅಜರ್​ ಮೆಹಮೂದ್​ ಮತ್ತು ಯೂಸೂಫ್​ ನನ್ನೊಂದಿಗೆ ಮಾತನಾಡಲೆಂದು ನನ್ನ ಕೋಣೆಗೆ ಬಂದರು. ಆಗಲೂ ಆಕೆಯನ್ನು ನನ್ನ ಕಬೋರ್ಡ್​ನಲ್ಲೇ ಇರಿಸಿದ್ದೆ. ಎಷ್ಟೋ ಹೊತ್ತಾದ ಬಳಿಕ ಅಜರ್​ ಮತ್ತು ಯೂಸೂಫ್​ಗೆ ನನ್ನ ಪತ್ನಿ ನನ್ನೊಂದಿಗೆ ಇರುವ ಅನುಮಾನ ಮೂಡಿತು. ಸುತ್ತಿಬಳಸಿ ಇದನ್ನು ಬಾಯ್ಬಿಡಿಸಲು ಅವರು ಪ್ರಯತ್ನಿಸಿದರು. ಸಾಕಷ್ಟು ತಡೆದುಕೊಂಡಿದ್ದ ನಾನು ಕೊನೆಗೂ ಸತ್ಯವನ್ನು ಒಪ್ಪಿಕೊಂಡು, ನನ್ನ ಪತ್ನಿಗೆ ಕಬೋರ್ಡ್​ ಬಂಧನದಿಂದ ಮುಕ್ತಿಕೊಡಿಸಿದೆ ಎಂದು ಹೇಳಿದ್ದಾರೆ.

    ಆಕೆಯ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ಪೊಲೀಸ್ ಇನ್ಸ್​ಪೆಕ್ಟರ್.. ಮುಂದೇನಾಯ್ತು? 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts