More

    ಬಾಲಾಕೋಟ್ ದಾಳಿ ಬಗ್ಗೆ ಮೊದಲು ಹೇಳಿದ್ದು ಪಾಕಿಸ್ತಾನಕ್ಕೆ, ರಹಸ್ಯ ಬಿಚ್ಚಿಟ್ಟ ಮೋದಿ!

    ನವದೆಹಲಿ: 2019ರಲ್ಲಿ ನಡೆದ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಜಗತ್ತಿಗೆ ಬಹಿರಂಗಪಡಿಸುವ ಮೊದಲು ಪಾಕಿಸ್ತಾನಕ್ಕೆ ಮಾಹಿತಿ ತಿಳಿಸಲಾಗಿತ್ತು ಎಂದು ಪ್ರಧಾನಿ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಹರಿದು ಬಿಸಾಡಲಿದೆ: ರಾಹುಲ್ ಗಾಂಧಿ

    ಬಾಗಲಕೋಟೆಯಲ್ಲಿ ಬೃಹತ್​ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಗೆ ಹಿಂಬದಿಯಿಂದ ಹೋರಾಟ ಮಾಡಿ ಗೊತ್ತಿಲ್ಲಾ. ನೇರ ಹೋರಾಟ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

    ಮೋದಿ ಅವರು ಮಾಧ್ಯಮಗಳನ್ನು ಕರೆಯಿಸಿ ಮಾಹಿತಿ ನೀಡಿ ನೀಡಿ ಎಂದಿದ್ದೆ, ಆದರೆ ಅದಕ್ಕೂ ಮೊದಲು ನಾನು ದೂರವಾಣಿ ಮೂಲಕ ಬಲೂಚಿಸ್ತಾನ್ ಮೇಲಿನ ವೈಮಾನಿಕ ದಾಳಿ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸುತ್ತೇನೆ ಎಂದರು. ಆದರೆ ಪಾಕ್​ ಅಧಿಕಾರಿಗಳು ನನ್ನ ಕರೆಯನ್ನು ಸ್ವೀಕರಿಸಿಲ್ಲ. ಮತ್ತೆ ಕಾಯುವಂತೆ ನಮ್ಮ ಪಡೆಗಳಿಗೆ ತಿಳಿಸಿದ್ದೆ. ಮೊದಲ ಪಾಕಿಸ್ತಾನಕ್ಕ ಮಾಹಿತಿ ನೀಡಿ ನಂತರ ಇಡೀ ಜಗತ್ತಿಗೆ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದರು.

    ಮಾಧ್ಯಮಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪಡೆಗಳನ್ನು ಕೇಳಿದ್ದೆ, ಆದರೆ ರಾತ್ರಿ ವೇಳೆ ನಡೆದ ವೈಮಾನಿಕ ದಾಳಿ ಮತ್ತು ಉಂಟಾದ ವಿನಾಶದ ಬಗ್ಗೆ ದೂರವಾಣಿ ಮೂಲಕ ಪಾಕಿಸ್ತಾನಕ್ಕೆ ತಿಳಿಸುವುದಾಗಿ ಮೊದಲೇ ಹೇಳಿದ್ದೆ ಆದರೆ ಪಾಕಿಸ್ತಾನದ ಜನರು ಫೋನ್‌ಗೆ ಬರಲಿಲ್ಲ. ನಾನು ಪಡೆಗಳನ್ನು ಕಾಯಲು ಕೇಳಿದೆ ಮತ್ತು ಅವರಿಗೆ ತಿಳಿಸಿದ ನಂತರ ನಾವು ರಾತ್ರಿಯಲ್ಲಿ ನಡೆದ ವಾಯುದಾಳಿಗಳ ಬಗ್ಗೆ ಜಗತ್ತಿಗೆ ಬಹಿರಂಗಪಡಿಸಿದ್ದೇವೆ.

    ಪಾಕಿಸ್ತಾನದೊಳಕ್ಕೆ ವೈಮಾನಿಕ ದಾಳಿ ನಡೆಸಿದ್ದ ಸಂದರ್ಭದಲ್ಲಿ ಹಲವು ಜನರು ಬಾಗಲಕೋಟೆ ಎಂದೇ ತಿಳಿದಿದ್ದರು. ನಂತರ ನಾವು ಸುದ್ದಿಗೋಷ್ಠಿ ಕರೆದು ಮಾಹಿತಿ ಬಹಿರಂಗಪಡಿಸಿದ ನಂತರ ಇದು ಪಾಕಿಸ್ತಾನದ ಬಾಲಾಕೋಟ್​ ಎಂಬುದು ಸ್ಪಷ್ಟವಾಗಿತ್ತು ಎಂದು ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡರು.
    “ಪತ್ರಿಕಾಗೋಷ್ಠಿಯನ್ನು ನಡೆಸಿದ್ದೇವೆ ಮತ್ತು ದಾಳಿಯ ನಂತರ ಶತ್ರುಗಳಿಗೆ ಉಂಟಾದ ವಿನಾಶದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದೇವೆ” ಎಂದು ಅವರು ಸಭೆಗೆ ತಿಳಿಸಿದರು.

    ಪ್ರಧಾನಿ ಮೋದಿ ವಸ್ತುಗಳನ್ನಾಗಲಿ, ದಾಳಿಯನ್ನಾಗಲಿ ಮುಚ್ಚಿಡುವುದಿಲ್ಲ. ಅವೆಲ್ಲವೂ ಮುಕ್ತವಾಗಿರುವ ವಿಷಯವಾಗಿದೆ. ದೇಶದ ಅಮಾಯಕ ಜನರನ್ನು ಯಾರು ಕೊಲ್ಲಲು ಪ್ರಯತ್ನಿಸುತ್ತಿದ್ದಾರೋ ಅಂತಹವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ನವ ಭಾರತದಲ್ಲಿ ಯಾರು ನಮ್ಮ ಗಡಿಯೊಳಗೆ ಬರುತ್ತಾರೋ ಅವರನ್ನು ಸದೆ ಬಡಿಯದೆ ಬಿಡುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

    2019 ರಲ್ಲಿ, ಭಾರತವು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಬಾಲಾಕೋಟ್ ವೈಮಾನಿಕ ದಾಳಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿತು ಎಂಬುವುದು ಉಲ್ಲೇಖನೀಯ. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಯುದ್ಧ ವಿಮಾನಗಳು ಫೆಬ್ರವರಿ 26, 2019 ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ ಆಕಾಶದಿಂದ ಬಾಂಬ್ ಸ್ಫೋಟಿಸುವ ಮೂಲಕ ಶಿಬಿರವನ್ನು ನಾಶಪಡಿಸಿದವು ಮತ್ತು ಅನೇಕ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಇದಕ್ಕೂ ಮೊದಲು ಫೆಬ್ರವರಿ 14 ರಂದು ಪುಲ್ವಾಮಾ ದಾಳಿಯಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಯೋಧರು ಹುತಾತ್ಮರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts