More

    2ನೇ ಟೆಸ್ಟ್​ ಗೆದ್ದು ಬೀಗಿದ ಭಾರತ: ಸಿರಾಜ್​, ಬುಮ್ರಾ ಬಿರುಗಾಳಿಗೆ ಆಫ್ರಿಕಾ ಉಡೀಸ್​, ಸರಣಿ ಸಮ

    ಕೇಪ್​ಟೌನ್​: ಮೊದಲ ಟೆಸ್ಟ್​ ಹೀನಾಯ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್​ನ ನ್ಯೂಲ್ಯಾಂಡ್ಸ್​ನಲ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಹರಣಿಗಳ ವಿರುದ್ಧ ಎರಡು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲ ಸಾಧಿಸಿದೆ.

    2ನೇ ಇನ್ನಿಂಗ್ಸ್‌ನಲ್ಲಿ 79 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 11.5 ಓವರ್‌ಗೆ 3 ವಿಕೆಟ್‌‌ ಕಳೆದುಕೊಂಡು 80 ರನ್‌ಗಳಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಆರಂಭಿಕ ಆಟಗಾರ ಜೈಸ್ವಾಲ್‌ (28) ರನ್‌ ಗಳಿಸಿ ವಿಕೆಟ್ ಔಟ್​ ಆದರೆ, ಶುಭ್‌ಮನ್ ಗಿಲ್ (17) ರನ್ ಮತ್ತು ವಿರಾಟ್ ಕೊಹ್ಲಿ (12) ರನ್‌ ಸಿಡಿಸಿ ವಿಕೆಟ್​ ಒಪ್ಪಿಸಿದರು. ನಾಯಕ ರೋಹಿತ್‌ 22 ಎಸೆತದಲ್ಲಿ 17 ರನ್ ಮತ್ತು ಶ್ರೇಯಸ್‌‌ ಅಯ್ಯರ್ 4 ರನ್‌ ಗಳಿಸುವ ಮೂಲಕ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಆಫ್ರಿಕಾ ಪರ ಮರ್ಕೋ ಜಾನ್ಸನ್‌, ಬರ್ಗರ್‌ ಮತ್ತು ರಬಾಡ ತಲಾ 1 ವಿಕೆಟ್ ಪಡೆದರು.

    ವೇಗದ ಬೌಲರ್​ ಮೊಹಮ್ಮದ್ ಸಿರಾಜ್ ಮೊದಲ ದಿನ ಎಲ್ಲರ ಗಮನ ಸೆಳೆದರು. ಎರಡನೇ ದಿನದದಲ್ಲಿ ಭರವಸೆಯ ಬೌಲರ್​ ಜಸ್ಪ್ರೀತ್ ಬುಮ್ರಾ ಹಲವು ದಾಖಲೆ ನಿರ್ಮಿಸಿದರು. ಬುಮ್ರಾ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಬೂಮ್ರಾ ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಒಂದೂವರೆ ದಿನದಲ್ಲಿ ಮುಕ್ತಾಯವಾದ ಪಂದ್ಯ ಎರಡೂ ಇನಿಂಗ್ಸ್​ನಲ್ಲೂ ವೇಗದ ಬೌಲರ್​ಗಳೇ ಪಾರುಪಾತ್ಯ ಮೆರೆದರು.

    ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​: 55ಕ್ಕೆ 10, ಎರಡನೇ ಇನಿಂಗ್ಸ್​: 176ಕ್ಕೆ 10 , ಭಾರತ ಮೊದಲ ಇನಿಂಗ್ಸ್ 153ಕ್ಕೆ 10 , ಎರಡನೇ ಇನಿಂಗ್ಸ್​ 80ಕ್ಕೆ 3.

    ನೀವು ರಸ್ತೆ ಬದಿ ಚಹಾ ಕುಡಿಯುತ್ತಿದ್ದೀರಾ? ಹಾಗಿದ್ರೆ ಈ ಭಯಂಕರ ರೋಗದ ಅಪಾಯ ಕಟ್ಟಿಟ್ಟ ಬುತ್ತಿ..!

    ಆಸ್ಪತ್ರೆಯ ಬೆಡ್‌ನಲ್ಲಿ ಉರ್ಫಿ ಜಾವೇದ್; ನಿನಗೆ ಏನಾಯ್ತಮ್ಮ ಅಂದ್ರು ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts