ಸಚಿನ್​, ರೋಹಿತ್​, ಕೊಹ್ಲಿ, ಈ ಮೂವರೊಳಗೆ ಉತ್ತಮ ಯಾರೆಂದ ವಾಸಿಂ ಜಾಫರ್​

kohli, rg and st for web
Published on

ಮುಂಬೈ: ವಾಸಿಂ ಜಾಫರ್​, ದೇಶೀಯ ಕ್ರಿಕೆಟ್​ನಲ್ಲಿ ಕಿಂಗ್​ ಆಗಿ ಮೆರೆದ ಆಟಗಾರ. ಇತ್ತೀಚೆಗಷ್ಟೇ ಉತ್ತರಾಖಂಡ ರಣಜಿ ತಂಡಕ್ಕೆ ಮುಖ್ಯಕೋಚ್​ ಆಗಿ ನೇಮಕಗೊಂಡಿರುವ ಜಾಫರ್​, ಕೇವಲ ಆಟಗಾರನಲ್ಲದೆ, ಉತ್ತಮ ವಿಶ್ಲೇಷಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ದಿಗ್ಗಜ ಸಚಿನ್​ ತೆಂಡುಲ್ಕರ್​, ಸ್ಟಾರ್​ ಬ್ಯಾಟ್ಸ್​ಮನ್​ ರೋಹಿತ್​ ಶರ್ಮ ಹಾಗೂ ನಾಯಕ ವಿರಾಟ್​ ಕೊಹ್ಲಿ, ಈ ಮೂವರ ನಡುವೆ ಏಕದಿನ ಕ್ರಿಕೆಟ್​ನಲ್ಲಿ ಉತ್ತಮರು ಯಾರೆಂಬ ಕಠಿಣ ಪ್ರಶ್ನೆಗೆ ತರ್ಕಬದ್ಧವಾಗಿಯೇ ಉತ್ತರ ನೀಡಿದ್ದಾರೆ ಜಾಫರ್​. ಮುಂಬೈನ ಜಾಫರ್​ ಪಾಲಿಗೆ ನಿಗದಿತ ಓವರ್​ಗಳಿಗೆ ವಿರಾಟ್​ ಕೊಹ್ಲಿಯೇ ಬೆಸ್ಟ್​ ಎಂದು ಸಕಾರಣದೊಂದಿಗೆ ವಿವರಿಸಿದ್ದಾರೆ.

ತವರು ನೆಲದ ಹುಡುಗರಿಗೆ ಮಣೆ ಹಾಕದ ಜಾಫರ್​, ಕ್ರಿಕ್​ ಟ್ರ್ಯಾಕರ್ ವೆಬ್​ಸೈಟ್​ನಲ್ಲಿ ನಡೆದ ಸಂವಾದಲ್ಲಿ ಕೊಹ್ಲಿಯೇ ಬೆಸ್ಟ್​ ಎಂದಿದ್ದಾರೆ. ಸಚಿನ್​ ಅಧುನಿಕ ಕ್ರಿಕೆಟ್​ನಲ್ಲಿ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ ಇರಬಹುದು, ಬ್ಯಾಟಿಂಗ್​ ವಿಭಾಗದಲ್ಲಿ ಎಲ್ಲ ಮಾದರಿಯ ವಿಶ್ವ ದಾಖಲೆಹೊಂದಿದ್ದಾರೆ. 463 ಪಂದ್ಯಗಳಿಂದ 49 ಶತಕ ಸೇರಿದಂತೆ ಸರಾಸರಿ 44.83 ರಂತೆ 18426 ರನ್​ ಕಲೆಹಾಕಿದ್ದಾರೆ. ಇನ್ನು ರೋಹಿತ್​ ಶರ್ಮ ಕುರಿತು ಹೇಳುವುದಾದರೆ, 3 ದ್ವಿಶತಕ ಸಿಡಿಸಿರುವ ಆಟಗಾರ. 49.27 ಸರಾಸರಿಯಂತೆ 29 ಶತಕ ಒಳಗೊಂಡಂತೆ 9915 ರನ್​ ಬಾರಿಸಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ 5 ಶತಕ ಸಿಡಿಸಿದ ದಾಖಲೆ ಕೂಡ ಹೊಂದಿದ್ದಾರೆ. ಆದರೂ ಇವರಿಬ್ಬರಿಗೂ ಕೊಹ್ಲಿಯೇ ಏಕದಿನ ಕ್ರಿಕೆಟ್​ನಲ್ಲಿ ಶ್ರೇಷ್ಠ ಬ್ಯಾಟ್ಸ್​ಮನ್​ ಎಂದು ಜಾಫರ್​ ತಮ್ಮ ನಿಲುವನ್ನು ಸಮಥಿರ್ಸಿಕೊಂಡಿದ್ದಾರೆ. ಇದುವರೆಗೂ 248 ಪಂದ್ಯಗಳಿಂದ 43 ಶತಕ ಬಾರಿಸಿರುವ ಕೊಹ್ಲಿ 11867 ರನ್​ ದಾಖಲಿಸಿದ್ದಾರೆ. ಕೊಹ್ಲಿಗೆ ಸಚಿನ್​ ದಾಖಲೆ ಹಿಮ್ಮೆಟ್ಟುವ ಅವಕಾಶವಿದ್ದು, ಅವರಲ್ಲಿ ಇನ್ನು ಕ್ರಿಕೆಟ್​ ಬಾಕಿ ಇದೆ ಎಂದು ಜಾಫರ್​ ವಿಶ್ಲೇಷಿಸಿದ್ದಾರೆ.

ಮುಂಬೈ ಹಾಗೂ ವಿದರ್ಭ ರಣಜಿ ತಂಡ ಪ್ರತಿನಿಧಿಸಿರುವ ಜಾಫರ್​, 30 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ವೃತ್ತಿ ಜೀವನದಲ್ಲಿ ಫೇವರಿಟ್​ ಪಾರ್ಟನರ್​ ಎಂದು ಹೇಳಿದ್ದಕ್ಕೆ ಯಾವಾಗಲೂ ಮನರಂಜನೆ ನೀಡುವ ವೀರೇಂದ್ರ ಸೆಹ್ವಾಗ್​ ಎಂದು ಹೇಳಿದ್ದಾರೆ. ಕಳೆದ ಋತುವಿನವರೆಗೂ ದೇಶೀಯ ಕ್ರಿಕೆಟ್​ನಲ್ಲಿ ಸಕ್ರಿಯವಾಗಿದ್ದ ಜಾರ್​, ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಉತ್ತರಾಖಂಡ ರಣಜಿ ತಂಡಕ್ಕೆ ಮುಖ್ಯಕೋಚ್​ ಆಗಿ ನೇಮಕಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net