ಐಪಿಎಲ್​ನಿಂದ ಹೊರಹೋಗಲು ನಿರ್ಧರಿಸಿದ್ದರಂತೆ ಆರ್​ಸಿಬಿ ಸ್ಪಿನ್ನರ್​ ಯಜುವೇಂದ್ರ ಚಾಹಲ್​..!

chahal
Published on

ನವದೆಹಲಿ: 14ನೇ ಆವೃತ್ತಿಯ ಐಪಿಎಲ್​ ಟೂರ್ನಿಯೂ ಕೋವಿಡ್​ ಮಹಾಮಾರಿಯಿಂದಾಗಿ ಅರ್ಧಕ್ಕೆ ಮೊಟಕುಗೊಂಡಿದೆ. ಸತತ ಎರಡು ದಿನಗಳ ಕಾಲ ಎರಡು ತಂಡಗಳಲ್ಲಿ ಕೋವಿಡ್​ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನಿದಿರ್ಷ್ಟಾವಧಿವರೆಗೆ ಟೂನಿರ್ಯನ್ನು ಮುಂದೂಡಲಾಯಿತು. ಆದರೆ, ಟೂರ್ನಿ ಮುಂದೂಡಿಕೆಗೂ ಮುನ್ನವೇ ಲೀಗ್​ನಿಂದ ಹೊರಹೋಗಲು ಆರ್​ಸಿಬಿ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ನಿರ್ಧರಿಸಿದ್ದರಂತೆ. ಪಾಲಕರಿಗೆ ಕೋವಿಡ್​ ಕಾಣಿಸಿಕೊಂಡಿದ್ದರಿಂದ ವಿಚಲಿತರಾದ ಚಾಹಲ್​, ಲೀಗ್​ನಿಂದ ಹೊರಹೋಗಲು ತೀರ್ಮಾನಿಸಿದ್ದರಂತೆ, ಆದರೆ, ಮೇ 3 ರಂದು ಲೀಗ್​ ಮುಂದೂಡಲಾಯಿತು ಎಂದು ಚಾಹಲ್​ ಹೇಳಿಕೊಂಡಿದ್ದಾರೆ.

ತಂದೆ-ತಾಯಿಗೆ ಕೋವಿಡ್​ ಬಂದಿರುವ ವಿಷಯ ಕೇಳಿ ಸಂಕಟವಾಯಿತು. ಇದರಿಂದ ಲೀಗ್​ನಲ್ಲಿ ಆಡುವ ಆಸಕ್ತಿ ಕೂಡ ಕುಂದಿತು. ತಾಯಿ ಕೋವಿಡ್​ನಿಂದ ಬೇಗ ಚೇತರಿಸಿಕೊಂಡರೆ, ತಂದೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಕ್ಸಿಜನ್​ ಪ್ರಮಾಣ 85-86ಕ್ಕೆ ಇಳಿದಿತ್ತು. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಗುರುವಾರ ಮನೆಗೆ ವಾಪಸಾದರು ಎಂದು ಚಾಹಲ್​ ಹೇಳಿಕೊಂಡಿದ್ದಾರೆ. ಇನ್ನು 7 ರಿಂದ 10 ದಿನಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದರು.

ಯಜುವೇಂದ್ರ ಚಾಹಲ್​, ಐಪಿಎಲ್​&2021ರಲ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್​ ಕಬಳಿಸಲಷ್ಟೇ ಶಕ್ತರಾಗಿದ್ದರು.. ಆರಂಭಿಕ ಎರಡು ಪಂದ್ಯಗಳಲ್ಲಿ ವಿಕೆಟ್​ ಪಡೆಯಲು ವಿಫಲರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net