ಶೀಘ್ರದಲ್ಲೇ ಭಾರತಕ್ಕೆ ಗುಡ್​ಬೈ ಹೇಳಲಿದ್ದಾರೆ ವಿರಾಟ್​ ಕೊಹ್ಲಿ! ಗುರುವಿನಿಂದಲೇ ಅಚ್ಚರಿ ಹೇಳಿಕೆ | Virat Kohli

Virat Kohli
Published on

Virat Kohli : ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ಶಾಶ್ವತವಾಗಿ ತೊರೆಯಲಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಲಿದ್ದಾರೆ. ಇದಕ್ಕಾಗಿ ಮಾಡಿದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ... ಈ ಮಾತುಗಳನ್ನಾಡಿದ್ದು ಬೇರೆ ಯಾರೂ ಅಲ್ಲ, ಕೊಹ್ಲಿಯ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ.

ಕ್ರಿಕೆಟ್‌ ಲೋಕದ ಕಿಂಗ್ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾದರು. ದಂಪತಿಗೆ 2021 ರಲ್ಲಿ ವಮಿಕಾ ಎಂಬ ಮಗಳು ಜನಿಸಿದರು. ಇತ್ತೀಚೆಗೆ ಅಕಾಯ್​ ಹೆಸರಿನ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಹುಟ್ಟಿದ ಸುಮಾರು 3 ವರ್ಷಗಳ ನಂತರ ಎರಡನೇ ಮಗುವಾಗಿದೆ.

ವಮಿಕಾ ಭಾರತದಲ್ಲಿ ಜನಿಸಿದರು. ತನ್ನ ಎರಡನೇ ಗರ್ಭಧಾರಣೆಗಾಗಿ ತನ್ನ ಪತಿ ವಿರಾಟ್‌ನೊಂದಿಗೆ ಅನುಷ್ಕಾ ಲಂಡನ್‌ಗೆ ಹೋಗಿದ್ದರು. ಅಲ್ಲಿಯೇ ತಮ್ಮ ಮಗನಿಗೆ ಅನುಷ್ಕಾ ಜನ್ಮ ನೀಡಿದರು. ಅಂದಿನಿಂದ ಕೊಹ್ಲಿ ಕುಟುಂಬ ಹೆಚ್ಚಾಗಿ ಲಂಡನ್​ನಲ್ಲಿ ನೆಲೆಸಿದೆ. ವಿರಾಟ್ ಕೂಡ ತವರು ನೆಲದಲ್ಲಿ ಪಂದ್ಯಗಳಿದ್ದಾಗ ಮಾತ್ರ ತವರಿಗೆ ಮರಳುತ್ತಾರೆ. ಸಾಗರೋತ್ತರ ಸರಣಿಯ ಸಮಯದಲ್ಲಿ ಅವರು ಲಂಡನ್‌ನಿಂದ ನೇರವಾಗಿ ಅಲ್ಲಿಗೆ ಪ್ರಯಾಣಿಸುತ್ತಾರೆ.

ಅದೇ ರೀತಿ ಅನುಷ್ಕಾ ಶರ್ಮಾ ಕೂಡ ಮುಂಬೈಗೆ ಕೇವಲ ಮಹತ್ವದ ಕೆಲಸಕ್ಕಾಗಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿರುಷ್ಕಾ ದಂಪತಿ ಲಂಡನ್​ನಲ್ಲಿ ಖಾಯಂ ನೆಲೆ ಸ್ಥಾಪಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ದೈನಿಕ್ ಜಾಗರಣ್​ ಮಾಧ್ಯಮದೊಂದಿಗೆ ಮಾತನಾಡಿದ್ದು, ನೀವು ಕೇಳುತ್ತಿರುವ ಈ ಎಲ್ಲ ವದಂತಿಗಳು ನಿಜ ಎಂದು ಹೇಳಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳಲು ಯೋಜಿಸಿದ್ದಾರೆ. ಶೀಘ್ರದಲ್ಲೇ ಅವರು ಶಾಶ್ವತವಾಗಿ ಭಾರತವನ್ನು ತೊರೆಯಲಿದ್ದಾರೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿಗಿರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅದೇ ರೀತಿ, ಅನುಷ್ಕಾ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೆಲೆಬ್ರಿಟಿ ಜೋಡಿಗೆ ಸಂಬಂಧಿಸಿದ ಒಂದು ಸಣ್ಣ ವಿಷಯವೂ ಕೂಡ ಅಭಿಮಾನಿಗಳಿಗೆ ದೊಡ್ಡ ಸುದ್ದಿಯಾಗುತ್ತದೆ. ಅವರ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಕಥೆಗಳು ಹರಿದಾಡುತ್ತವೆ. ಕೆಲವೊಮ್ಮೆ ಕಾಮೆಂಟ್‌ಗಳು ಕೂಡ ತಮಾಷೆಯಾಗಿರುತ್ತವೆ.

ಪಂದ್ಯವೊಂದರಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿಯನ್ನು ಬೆಂಬಲಿಸಿದ ಕಾರಣಕ್ಕೆ ಕೆಲವು ಗೂಂಡಾಗಳು ಕೊಹ್ಲಿ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿರುಷ್ಕಾ ದಂಪತಿ ತಮ್ಮ ಮಕ್ಕಳನ್ನು ಮುಖ್ಯವಾಹಿನಿಯಿಂದ ದೂರ ಇಡಲು ನಿರ್ಧರಿಸಿದ್ದಾರೆ. ಇದುವರೆಗೂ ಮಕ್ಕಳ ಫೋಟೋಗಳನ್ನು ಜಗತ್ತಿಗೆ ತೋರಿಸಿಲ್ಲ. ತಮ್ಮ ಮಕ್ಕಳ ಖಾಸಗಿತನದ ಬಗ್ಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಂಡನ್​ನಲ್ಲಿ ಶಾಶ್ವತವಾಗಿ ನೆಲೆಯೂರಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ವಿದಾಯ ಹೇಳಿರುವ ದಾಖಲೆಗಳ ದೊರೆ, ​​ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಂದ ನಿವೃತ್ತಿಯಾದ ಬಳಿಕ ಲಂಡನ್​ಗೆ ತಮ್ಮ ನಿವಾಸವನ್ನು ಬದಲಾಯಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅವರು ತಮ್ಮ ಪತ್ನಿ ಅನುಷ್ಕಾ ಮತ್ತು ಮಕ್ಕಳಾದ ವಮಿಕಾ ಮತ್ತು ಅಕಾಯ್​ನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಕೊಹ್ಲಿ ಈಗಾಗಲೇ 81 (ಟೆಸ್ಟ್‌ನಲ್ಲಿ 30, ಏಕದಿನದಲ್ಲಿ 50, ಟಿ20ಯಲ್ಲಿ 1) ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net