VIrat Kohli, Rohit Sharma ಸ್ಥಿತಿ ನೋಡಿದರೆ ಬಾಬರ್​ ನೆನಪಾಗುತ್ತಾನೆ; ಪಾಕ್​​ ಮಾಜಿ ಆಟಗಾರನ ಹೇಳಿಕೆ ವೈರಲ್​​

Virat Rohit
Published on

ನವದೆಹಲಿ: ತವರಿನಲ್ಲಿ ನಡೆದ ನ್ಯೂಜಿಲೆಂಡ್​ (NewZealand) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ (Test Series) ಸೋಲುವ ಮೂಲಕ ಟೀಮ್​ ಇಂಡಿಯಾ (Team India) ಭಾರೀ ಮುಖಭಂಗಕ್ಕೆ ಒಳಗಾಗಿದ್ದು, ಈ ವಿಚಾರವನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರರು ಟೀಮ್​ ಇಂಡಿಯಾವನ್ನು ಟೀಕಿಸಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ಚಾಂಪಿಯನ್ಸ್​ ಟ್ರೋಫಿ ವಿಚಾರವಾಗಿ ಮನವಿ ಮಾಡುತ್ತಿದ್ದ ಆಟಗಾರರು ಇದೀಗ ಭಾರತವನ್ನು ಟೀಕಿಲಸು ಶುರು ಮಾಡಿದ್ದು, ಈ ವಿಚಾರ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನ್ಯೂಜಿಲೆಂಡ್​ ಎದುರಿನ ಸರಣಿ ಸೋಲಿನ ಬಗ್ಗೆ ವಾಸಿಂ ಅಕ್ರಮ್​ (Wasim Akram) ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಮೇಲೆ ಇದೀಗ ಬಸಿತ್​ ಅಲಿ (Basit Ali) ಕೂಡ ಸರಣಿ ಸೋಲನ್ನು ಉಲ್ಲೇಖಿಸಿ ಮಾತನಾಡಿದ್ದು, ಟೀಮ್​ ಇಂಡಿಯಾದ (Team India) ಆಟಗಾರರನನ್ನು ಬಾಬರ್​ ಅಜಂಗೆ ಹೋಲಿಸಿ ಮಾತನಾಡಿದ್ದಾರೆ. ಈ ಸುದ್ದಿ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದು, ಕಮೆಂಟ್​ ಮೂಲಕ ವಾಗ್ದಾಳಿ ನಡೆಸುತ್ತಿದ್ದಾರೆ.

Basit Ali

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಬಸಿತ್​ ಅಲಿ, ವಿರಾಟ್​ (Virat Kohli) ಹಾಗೂ ರೋಹಿತ್​ನನ್ನು (Rohit Sharma) ನೋಡಿದರೆ ನನಗೆ ಬಾಬರ್​ ನೆನಪಾಗುತ್ತಾನೆ. ಇವರಿಬ್ಬರ ಫಾರ್ಮ್​​ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದು, ನ್ಯೂಜಿಲೆಂಡ್​ ಎದುರಿನ ಟೆಸ್ಟ್​ ಸರಣಿಯೇ ಇದಕ್ಕೆ ಸಾಕ್ಷಿಯಾಗಿದೆ.

ಇವರಿಬ್ಬರು ಫಾರ್ಮ್​ನಲ್ಲಿ ಇರದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ವಿರಾಟ್​ (Virat Kohli) ಹಾಗೂ ರೋಹಿತ್​ನನ್ನು (Rohit Sharma) ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಒಂದು ಸುತ್ತು ದೇಶೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಆಡಿ ಆ ನಂತರ ಆತ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಭಾಗಿಯಾಗಬೇಕು. ನೀವಿಬ್ಬರು ದೇಶೀಯ ಟೂರ್ನಿಯಲ್ಲಿ ಭಾಗಿಯಾಗಿ ಆ ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಿ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಬಸಿತ್​ ಅಲಿ (Basit Ali) ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net