ಬೆಂಗಳೂರು: ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ಸ್ ಸ್ಪೆಷಲ್, ಎರಡನೇ ಸಲ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಿರ್ದೇಶಕ, ರಾಜ್ಯ ಪ್ರಶಸ್ತಿ ವಿಜೇತ ಗುರುಪ್ರಸಾದ್ (Guruprasad) ಅವರ ಸಾವು ಕನ್ನಡ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದ್ದು, ಅವರ ಅತ್ಮಹತ್ಯೆಯ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿತ್ತು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ತನಿಖೆ ವೇಳೆ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.
ಮಾದಾವರ ಬಳಿ ಇರುವ ಟಾಟಾ ನ್ಯೂ ಹೆವನ್ – ರಿವಾ ಕ್ಲಬ್‌ಹೌಸ್ ಅಪಾರ್ಟ್ಮೆಂಟ್ನಲ್ಲಿ ಗುರುಪ್ರಸಾದ್ (Guruprasad) ವಾಸವಿದ್ದರು, ಅದೇ ಮನೆಯಲ್ಲಿ ನವೆಂಬರ್ 03ರಂದು ಗುರುಪ್ರಸಾದ್ (Guruprasad) ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಹ;ವು ರೀತಿಯ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು. ಇದೀಗ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಒಂದೊಂದೇ ಆಘಾತಕಾರಿ ಅಂಶ ಬೆಳಕಿಗೆ ಬರುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ಗುರುಪ್ರಸಾದ್ ಅವರು ಅಕ್ಟೋಬರ್ 29ರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದ ಗುರುಪ್ರಸಾದ್ (Guruprasad), ಹೊಸದಾಗಿ ಹಗ್ಗ ಹಾಗೂ ಕರ್ಟನ್ ಖರೀದಿ ಮಾಡಿದ್ದರಂತೆ. ಹಗ್ಗ ಖರೀದಿ ಮಾಡಿಕೊಂಡು ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಕರ್ಟನ್‌ಗಳು (Curtain) ಹಾಕಿ ಕವರ್ ಮಾಡಿದ್ದಾರೆ. ನಂತರ ಮನೆಯ ಬಾಗಿಲಿನ ಒಳಗಿನಿಂದಲೇ ಚಿಲಕ ಹಾಕಿ ಅಲ್ಲೇ ಇದ್ದ ದಿವಾನದ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
4 ಮೊಬೈಲ್ಗಳನ್ನು ಬಳಸುತ್ತಿದ್ದ ಗುರುಪ್ರಸಾದ್ (Guruprasad) ಎಲ್ಲವನ್ನೂ ಫ್ಲೈಟ್ ಮೂಡ್ನಲ್ಲಿ ಇಡ್ತಾ ಇದ್ರು ಎನ್ನಲಾಗಿದೆ. ಮನೆಯ ವೈಫೈ ಬಳಕೆ ಮಾಡಿಕೊಂಡು ವಾಟ್ಸಾಪ್ ಕಾಲ್ ಮಾಡ್ತಿದ್ರು ಎಂದು ವರದಿಯಾಗಿದೆ. ಸದ್ಯ ಗುರುಪ್ರಸಾದ್ ಬಳಸ್ತಿದ್ದ ಫೋನ್, ಟ್ಯಾಬ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿಲಾಗಿದೆ. ಇನ್ನೂ ಗುರುಪ್ರಸಾದ್ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈವರೆಗೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ.
IPL ಹರಾಜಿನಲ್ಲಿ ಈತನಿಗೆ 50 ಕೋಟಿ ರೂ. ಫಿಕ್ಸ್… Team India ಬ್ಯಾಟರ್ ಕುರಿತು Pak ಮಾಜಿ ಆಟಗಾರನ ಹೇಳಿಕೆ ವೈರಲ್
ಪಬ್ನಲ್ಲಿ ಪರಿಚಯವಾಗಿದ್ದ ಯುವತಿ ಮೇಲೆ Gang Rape; ಆರೋಪಿಗಳು ಅರೆಸ್ಟ್