ನವದೆಹಲಿ: 2022ರ ವರ್ಷಾಂತ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್ (Rishabh Pant) ಬಗ್ಗೆ ಮೆಚ್ಚುಗೆಯ ಮಹಾಪೂರಗವೇ ಹರಿದು ಬರುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಏಕಾಂಗಿ ಹೋರಾಟ ಎಲ್ಲರ ಗಮನ ಸೆಳೆದಿತ್ತು. ಇದೀಗ ಪಂತ್ ಪ್ರದರ್ಶನವನ್ನು ಕೊಂಡಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತವರಿನ ಆತಿಥ್ಯದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ (Team India) ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದು, ಇಷ್ಟು ದಿನ ಟೀಮ್ ಇಂಡಿಯಾವನ್ನು (Team India) ಹಾಡಿ ಹೊಗಳುತ್ತಿದ್ದವರು ಇದೀಗ ಪುಪುಂಖಾನುಪುಂಖವಾಗಿ ಟೀಕಿಸುತ್ತಿದ್ದಾರೆ (Criticise). ತವರು ನೆಲದಲ್ಲಿ ಸರಣಿ ಸೋಲಿಗೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಮಾತನಾಡುತ್ತಿದ್ದು, ಭಾರತದ ಕಳಪೆ ಪ್ರದರ್ಶನವನ್ನು ಟೀಕಿಸಿ ಸೋಲಿಗೆ ಪ್ರಮುಖ ಕಾರಣಗಳನ್ನು ಉಲ್ಲೇಖಿಸುತ್ತಿದ್ಧಾರೆ. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಮಾಜಿ ಆಟಗಾರ ಬಸಿತ್ ಅಲಿ ರಿಷಭ್ ಪಂತ್ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ (Rishabh Pant) 60 ಹಾಗೂ 64 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಈತನ ಬಗ್ಗೆ ನಾನೇನು ಹೇಳುವುದಿಲ್ಲ. ಜನರು ಐಪಿಎಲ್ನಲ್ಲಿ (IPL) ಆತ 25 ಕೋಟಿಗೆ ಮಾರಾಟವಾಗುತ್ತಾನೆ ಎಂದು ಹೇಳುತ್ತಾರೆ. ಆದರೆ, ನನ್ನ ಪ್ರಕಾರ ಹರಾಜಿನಲ್ಲಿ ಆತನಿಗೆ 50 ಕೋಟಿ ರೂಪಾಯಿ ಕೊಟ್ಟರು ಸಾಲದು. ಆತ ಬ್ಯಾಟ್ ಮಾಡಿದ ರೀತಿ ನೋಡಿದರೆ ಫರ್ಪೆಕ್ಟ್ ಶಾಟ್ ಸೆಲೆಕ್ಷನ್ ಎಂದು ತಿಳಿಯುತ್ತಿತ್ತು. ಈ ಒಂದು ಕಾರಣಕ್ಕಾದರೂ ಆತನನ್ನು ಐಪಿಎಲ್ನಲ್ಲಿ ಆತನನ್ನು 50 ಕೋಟಿ ರೂಪಾಯಿಗೆ ಖರೀದಿಸಬೇಕು ಎಂದು ಬಸಿತ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪರೆ ಆಡಿದ್ದ ರಿಷಭ್ ಪಂತ್ರನ್ನು (Rishabh Pant) ತಂಡದಿಂದ ಕೈ ಬಿಡಲಾಗಿದ್ದು, ನವೆಂಬರ್ 24-25ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ರಿಷಭ್ ಪಂತ್ರನ್ನು ಖರೀದಿಸಲು ಬಹುತೇಕ ತಂಡಗಳು ಉತ್ಸುಕವಾಗಿದ್ದು, ಅಂತಿಮವಾಗಿ ಯಾವ ತಂಡ ಸೇರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಪಬ್ನಲ್ಲಿ ಪರಿಚಯವಾಗಿದ್ದ ಯುವತಿ ಮೇಲೆ Gang Rape; ಆರೋಪಿಗಳು ಅರೆಸ್ಟ್