ಆ ವೈಖರಿಯಿಂದಲೇ ವಿನೇಶ್‌ ಫೋಗಟ್​ಗೆ ಮೆಡಲ್​ ದಕ್ಕಲಿಲ್ಲ: ಕೋಚ್ ಕೃಪಾ ಹೀಗೆನ್ನಲು ಕಾರಣ ಇದೇ..

Vinesh Phogat
Published on

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಸ್ಟಾರ್​ ಕುಸ್ತಿಪಟು ವಿನೇಶ್‌ ಫೋಗಟ್‌ ಅನರ್ಹತೆಗೆ ಭಾರತೀಯ ಕುಸ್ತಿ ಫೆಡರೇಷನ್ ಕಾರಣ ಎಂದು ಕೋಚ್ ಕೃಪಾ ಶಂಕರ್ ಆರೋಪಿಸಿದ್ದಾರೆ.

ಆಕೆ ತೂಕಕ್ಕೆ ಸಂಬಂಧಿಸಿದಂತೆ ಇಂತಹ ಪರಿಸ್ಥಿತಿಯನ್ನುಎಂದೂ ಎದುರಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಇಂತಹ ಅನುಭವ ಆಗಿರಲಿಲ್ಲ. ಕಡಿಮೆ ಅವಧಿಯಲ್ಲಿ ಎರಡೆರಡು ಬಾರಿ ತೂಕ ನೋಡುವ ಅಗತ್ಯವಿರಲಿಲ್ಲ. ರಾಷ್ಟ್ರಮಟ್ಟದ ಟೂರ್ನಿಗಳಲ್ಲೂ ಈ ರೀತಿ ಆಗಿಲ್ಲ. ಹೀಗಾಗಿ ದೇಶಿಯ ಕುಸ್ತಿಪಟುಗಳಿಗೂ ಸಾಂದರ್ಭಿಕವಾಗಿ ಜಾರಿಗೆ ತರಬೇಕಿತ್ತು. ಆದರೆ ಭಾರತೀಯ ಕುಸ್ತಿ ಫೆಡರೇಶನ್ ಇದನ್ನು ನಿರ್ಲಕ್ಷಿಸಿದ್ದು, ಒಂದೇ ದಿನದಲ್ಲಿ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಕೃಪಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net