ಹೈದರಾಬಾದ್: ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆದರೆ, ಇವರಿಬ್ಬರು ಮೊದಲ ಬಾರಿಗೆ ಯಾವಾಗ ಮತ್ತು ಹೇಗೆ ಭೇಟಿಯಾದರು ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ನೀವು ಮುಸ್ಲಿಮರ ಶತ್ರುಗಳು: ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ
ನಾಗಚೈತನ್ಯ, ಸಮಂತಾಗೆ ವಿಚ್ಛೇದನ ನೀಡಿದ ನಂತರ ಸೋಭಿತಾ ಧೂಳಿಪಾಲ ಅವರು ಅಡಿವಿ ಶೇಶ್ ನಾಯಕರಾಗಿ ನಟಿಸಿರುವ ‘ಗೂಢಚಾರಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಸುಪ್ರಿಯಾ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸುಪ್ರಿಯಾ ಸೋಭಿತಾಳನ್ನು ನಾಗ ಚೈತನ್ಯಗೆ ಪರಿಚಯಿಸಿದ್ದರು. ಸಮಂತಾ ವಿಚ್ಛೇದನಕ್ಕೆ ಶೋಭಿತಾ ಕೂಡ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸೂಪರ್ ಡಿಲಕ್ಸ್’ ನಂಥ ಸರಣಿಯಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದು, ಸಮಂತಾ ವಿಚ್ಛೇದನಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.
ಅದೇನೇ ಇರಲಿ ‘ಗೂಢಚಾರಿ’ ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಈ ಇಬ್ಬರು ಸುಮಾರು ಆರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇದರ ನಡುವೆ ನಾಯಕಿಯೊಬ್ಬರಿಗೆ ವಿಚ್ಛೇದನ ನೀಡಿದ ನಂತರ ಮತ್ತೊಮ್ಮೆ ಚಿತ್ರರಂಗದ ಹುಡುಗಿಯನ್ನು ಮದುವೆಯಾಗುತ್ತಿರುವ ಬಗ್ಗೆ ಅಕ್ಕಿನೇನಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮದುವೆಯ ನಂತರ ಸೋಭಿತಾ ಅಕ್ಕಿನೇನಿ ಸೊಸೆಯಾಗಿ ಮನೆಗೆ ಸೀಮಿತವಾಗುತ್ತಾರಾ? ಇಲ್ಲವಾದಲ್ಲಿ ಅವರೇ ಸಿನಿಮಾ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು. ಮಾಡೆಲಿಂಗ್‌ನಿಂದ ಬಂದಿರುವ ಸೋಭಿತಾಗೆ ತನ್ನನ್ನು ತಾನು ಎಕ್ಸ್‌ಪೋಸ್ ಮಾಡಲು ಯಾವುದೇ ಹಿಂಜರಿಕೆ ಇಲ್ಲ. ಈವರೆಗೆ ಮಾಡಿರುವ ಚಿತ್ರಗಳಲ್ಲಿ ಎಲ್ಲೆ ಮೀರಿ ಸಂಭ್ರಮದಿಂದ ನಟಿಸಿದ್ದಾರೆ. ಮದುವೆಯ ನಂತರವೂ ಇದೇ ವೇಗವನ್ನು ಮುಂದುವರಿಸಿದರೆ ನಾಗ ಚೈತನ್ಯ ಒಪ್ಪುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ನಾಗ ಚೈತನ್ಯ ಸದ್ಯಕ್ಕೆ ಚಂದು ಮೊಂಡೇಟಿ ನಿರ್ದೇಶನದ ‘ತಾಂಡೇಲ್’ ಸಿನಿಮಾ ಮಾಡುತ್ತಿದ್ದಾರೆ.ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ.
ನಾಗಚೈತನ್ಯ – ಶೋಭಿತಾ ನಿಶ್ಚಿತಾರ್ಥ ಕುರಿತು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದೇನು?