ನವದೆಹಲಿ: ‘ನೀವು ಮುಸ್ಲಿಮರ ಶತ್ರುಗಳು, ಅದಕ್ಕೆ ಈ ಮಸೂದೆಯೇ ಸಾಕ್ಷಿ’ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಕ್ಫ್ ಮಸೂದೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾಗಚೈತನ್ಯ – ಶೋಭಿತಾ ನಿಶ್ಚಿತಾರ್ಥ ಕುರಿತು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದೇನು?
ಸಂಸತ್ನಲ್ಲಿ ವಕ್ಫ್ ಮಸೂದೆ ಕುರಿತು ಮಾತನಾಡಿ, ವಕ್ಫ್ ಗೆ ತಿದ್ದುಪಡಿ ಮಾಡುವ ಸಾಮರ್ಥ್ಯ ಈ ಸದನಕ್ಕೆ ಇಲ್ಲ. ವಕ್ಫ್ ಸಾರ್ವಜನಿಕ ಆಸ್ತಿಯಲ್ಲ. ದರ್ಗಾ, ವಕ್ಫ್‌ನಂತಹ ಆಸ್ತಿಗಳನ್ನು ಈ ಸರ್ಕಾರ ಕಬಳಿಸಲು ಬಯಸುತ್ತಿದೆಯೇ? ಈ ತಿದ್ದುಪಡಿ ಮಸೂದೆಯ ಪರಿಚಯವು ಸಂವಿಧಾನದ ಮೂಲ ರಚನೆಯ ಮೇಲೆ “ಗಂಭೀರ ದಾಳಿ” ಎಂದು ಹೇಳಿದರು.
‘ಕೆಲವು ಮಾಫಿಯಾಗಳು ವಕ್ಫ್ ಮಂಡಳಿಯನ್ನು ವಶಪಡಿಸಿಕೊಂಡಿವೆ, ಪ್ರತಿಪಕ್ಷಗಳು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ’ ಎಂದು ಸಚಿವ ಕಿರಣ್ ರಿಜಿಜು ಸಂಸತ್ತಿನಲ್ಲಿ ವಕ್ಫ್ ಮಸೂದೆ ಕುರಿತು ಹೇಳಿದ್ದರು.
ಆರೆಸ್ಸೆಸ್ ಹೇಳಿಕೊಳ್ಳುವ ಮಸೀದಿಗಳನ್ನು ಕಿತ್ತುಕೊಳ್ಳಲು ನೀವು ಬಯಸುತ್ತೀರಿ, ಬಲಪಂಥೀಯ ಹಿಂದುತ್ವ ಸಂಘಟನೆಗಳು ಪ್ರತಿಪಾದಿಸುತ್ತಿರುವ ದರ್ಗಾಗಳನ್ನು ಕಿತ್ತುಕೊಳ್ಳಲು ನೀವು ಬಯಸುತ್ತೀರಿ. ಇದರಲ್ಲಿ ಅಪಾಯಕಾರಿಯಾದ ಹಲವು ಅಂಶಗಳಿವೆ. ವಕ್ಫ್ ಅನ್ನು ಕೆಡವಲು ಮತ್ತು ಮುಸ್ಲಿಮರನ್ನು ತೊಡೆದುಹಾಕಲು ಇದು ಒಂದು ಮಾರ್ಗವಾಗಿದೆ ಎಂದು ಬಳಿಕ ಸುದ್ದಿಗೋಷ್ಟಿಯಲ್ಲಿ ಓವೈಸಿ ತಿಳಿಸಿದರು.
ಆ.8(ಗುರುವಾರ) ಲೋಕಸಭೆಯಲ್ಲಿ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನು ತಿದ್ದುಪಡಿ ಮಸೂದೆಯನ್ನು ಸರ್ಕಾರ ಮಂಡಿಸಿದ್ದು, ನಂತರ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲು ಶಿಫಾರಸು ಮಾಡಲಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ‘ವಕ್ಫ್ (ತಿದ್ದುಪಡಿ) ಮಸೂದೆ, 2024’ ಅನ್ನು ಸದನದಲ್ಲಿ ಮಂಡಿಸಿದರು.