

ಲಂಡನ್: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಒಬ್ಬ ಹೊಸ ಆಟಗಾರ ಟೀಂ ಇಂಡಿಯಾ ಸೇರಲು ಮೈದಾನಕ್ಕೆ ಎಂಟ್ರಿ ಕೊಟ್ಟ ಪ್ರಸಂಗ ನಡೆದಿದೆ! ಭಾರತ ತಂಡದ ಜೆರ್ಸಿ ತೊಟ್ಟು ಜಾರ್ವೊ ಎಂದು ಹೆಸರು ಹಾಕಿಕೊಂಡಿದ್ದ ಈ ಅಭಿಮಾನಿಯ ಪ್ರವೇಶ ಆಟಗಾರರನ್ನು ದಂಗುಗೊಳಿಸಿತು.
ಕ್ರಿಕೆಟ್ ಪಿಚ್ ಪ್ರವೇಶಿಸಿದ 'ಜಾರ್ವೋ'ನನ್ನು ಸೆಕ್ಯುರಿಟಿ ಸಿಬ್ಬಂದಿ ಹೊರಕ್ಕೆ ಕರೆದೊಯ್ಯುತ್ತಿರುವಂತೆ ಮೊಹಮ್ಮದ್ ಸಿರಾಜ್ ನಗುವಿನಲ್ಲಿ ಮುಳುಗಿದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕಾಮೆಂಟ್ರಿ ಹೇಳುತ್ತಿದ್ದವರೂ, ತಂಡಗಳ ಇತರ ಆಟಗಾರರೂ ನಗೆ ಸೂಸಿದರು. (ಏಜೆನ್ಸೀಸ್)