ಸಿರಾಜ್​ ಅವಾಚ್ಯ ಪದ ಬಳಸಿದ! ಕೋತಿ ತಿಂದು ಮೇಕೆ ಬಾಯಿಗೆ ಒರೆಸುವ ಕೆಲಸ ಮಾಡಿದ ಹೆಡ್​ಗೆ ಫ್ಯಾನ್ಸ್ ಛೀಮಾರಿ​ | Siraj

ವಿಜಯವಾಣಿ - 2024-12-07T213856.875
Published on

ನವದೆಹಲಿ: ಇಂದು ಅಡಿಲೈಡ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್​​ನ ಎರಡನೇ ಇನ್ನಿಂಗ್ಸ್​ನಲ್ಲಿ​ ಟೀಮ್ ಇಂಡಿಯಾದ ಬ್ಯಾಟರ್​ಗಳು ಉತ್ತಮವಾಗಿ ಬ್ಯಾಟ್​ ಮಾಡಿದರು. ಆದರೆ, ಇದಕ್ಕೂ ಮೊದಲು ಕಾಂಗರೂ ಪಡೆಯ ಬ್ಯಾಟ್ಸ್​ಮನ್​ಗಳಿಗೆ ವೇಗದ ಬೌಲಿಂಗ್​ನಲ್ಲಿ ತಮ್ಮ ಸಾಮರ್ಥ್ಯ ತೋರಿದ ಬೌಲರ್​ಗಳು, ಆಸ್ಟ್ರೇಲಿಯಾದ ಬ್ಯಾಟರ್​ಗಳ ಬೆವರಿಳಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಟ್ರಾವಿಸ್​ ಹೆಡ್​ ಮತ್ತು ಮೊಹಮ್ಮದ್​ ಸಿರಾಜ್ (Siraj)​ ನಡುವೆ ನಡೆದ ಮಾತಿನ ಚಕಮಕಿ ದೃಶ್ಯ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಅಸಂಬದ್ಧ

82ನೇ ಓವರ್​ ಬೌಲಿಂಗ್ ಮಾಡುತ್ತಿದ್ದ ಸಿರಾಜ್​, ಸ್ಟ್ರೈಕ್​ನಲ್ಲಿದ್ದ ಟ್ರಾವಿಸ್​ ಹೆಡ್​ರನ್ನು ಕ್ಲೀನ್​ ಬೋಲ್ಡ್​ ಮಾಡುತ್ತಾರೆ. ವಿಕೆಟ್ ಪಡೆದ ಸಂತಸದಲ್ಲಿ ಹೆಡ್​ರನ್ನೇ ನೋಡುತ ಕಿಚ್ಚಾಯಿಸಿದ ಸಿರಾಜ್​ಗೆ ಟ್ರಾವಿಸ್​ ಎರಡು ಮೂರು ಪದಗಳಿಂದ ಅವಾಚ್ಯ ಪದಗಳನ್ನು ಹೇಳಿದರು ಎಂಬ ವಿಷಯ ನೋಡುಗರ ಗಮನಕ್ಕೆ ಬಂದಿತು. ಇದೇ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಟ್ರಾವಿಸ್​ ಹೆಡ್​ ಮುಂದಿಟ್ಟ ಪತ್ರಕರ್ತರು, ನಿಮ್ಮ ಮತ್ತು ಸಿರಾಜ್​ ನಡುವೆ ನಡೆದಿದ್ದೇನು ಎಂದು ನೇರವಾಗಿ ಕೇಳಿದರು. ಆದರೆ, ಇದಕ್ಕೆ ಬಂದ ಉತ್ತರ ಮಾತ್ರ ಅಸಂಬದ್ಧ.

ಪತ್ರಕರ್ತರು ಗರಂ

'ನನ್ನ ವಿಕೆಟ್​ ಕಬಳಿಸಿದ ಸಿರಾಜ್​ಗೆ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೀರಿ ಎಂದು ಹೇಳಿದೆ. ಆದರೆ, ಅವರು ಮಾತ್ರ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು' ಎಂದಿದ್ದಾರೆ. ವಿಡಿಯೋ ಸಾಕ್ಷಿ ಕಣ್ಣು ಮುಂದಿದ್ದರು ಕೂಡ ಮಾತನ್ನು ತಿರುಗಿಸಿದ ಹೆಡ್​ ವಿರುದ್ಧ ಪತ್ರಕರ್ತರು ಗರಂ ಆಗಿದ್ದಾರೆ. ಇದು ಸುಳ್ಳು ಆರೋಪ ಎಂದು ಒತ್ತಿ ಹೇಳಿದ್ದಾರೆ. ಟ್ರಾವಿಡ್​ ಹೆಡ್​ ಹೇಳಿಕೆ ಕೇಳುತ್ತಿದ್ದಂತೆ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್​ ಚೋಪ್ರಾ ಟ್ವೀಟ್​ ಮಾಡಿ ಟೀಕಿಸಿದರೆ, ಕ್ರಿಕೆಟ್​ ಪ್ರೇಮಿಗಳು ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು, ಹೆಡ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net