ವಿಜಿಂಜಂ: ಮುಕ್ಕೋಳದ ಪೆಟ್ರೋಲ್ ಪಂಪ್‌ನಿಂದ ಆಂಬ್ಯುಲೆನ್ಸ್ಗೆ 500 ರೂ. ಇಂಧನ ತುಂಬಿಸಿಕೊಂಡು, ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಚಾಲಕನಿಗೆ ವಾಹನ ದಾರಿ ಮಧ್ಯೆಯೇ ಕೈಕೊಟ್ಟಿದೆ. ಈ ವಿಷಯ ಒಂದು ನಿಮಿಷ ಆತನನ್ನು ಭಾರೀ ಅಚ್ಚರಿಗೆ ದೂಡಿದೆ. ಮೊದ ಮೊದಲು ಆಂಬ್ಯುಲೆನ್ಸ್ನಲ್ಲಿ ಇಂಧನದ ಬದಲಿಗೆ ಬೇರೆ ಯಾವುದೋ ಸಮಸ್ಯೆ ಕಾಡುತ್ತಿರಬಹುದು ಎಂದು ಊಹಿಸಿದ್ದ ಡ್ರೈವರ್ಗೆ ತನ್ನ ಬಳಿಯಿದ್ದ ಇಂಧನದ (Petrol Pump) ಬಿಲ್ ನೋಡಿದಾಗಲೇ ಅಸಲಿ ಸಂಗತಿ ಏನು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಕೆಎಂಎಫ್ ನಿಂದ ಶೀಘ್ರದಲ್ಲೇ ದೋಸೆಹಿಟ್ಟು ಮಾರಾಟ|Dosa flour sale coming soon from KMF
ರೋಗಿಯನ್ನು ಕರೆದುಕೊಂಡು ಹೋಗುವ ಮುನ್ನ ಆಂಬ್ಯುಲೆನ್ಸ್ಗೆ 500 ರೂ. ಪೆಟ್ರೋಲ್ ಹಾಕಿಸಿದ್ದ ಚಾಲಕ, ಆಸ್ಪತ್ರೆಗೆ ಹೋಗುವ ಮುನ್ನವೇ ಇಂಧನ ಖಾಲಿ ಆಗಿರುವುದನ್ನು ಕಂಡು ಗೊಂದಲಕ್ಕೀಡಾಗಿದ್ದ. ಇದನ್ನು ಪರಿಶೀಲಿಸಲು ತನ್ನ ಬಳಿಯಿದ್ದ ಪೆಟ್ರೋಲ್ ಬಂಕ್ನ ಬಿಲ್ ನೋಡಿದಾಗ ಆತನಿಗೆ ಸ್ಪಷ್ಟವಾಗಿದ್ದು, ಪೆಟ್ರೋಲ್ ತುಂಬಿಸುವಲ್ಲಿ ಅವ್ಯವಹಾರ ನಡೆದಿದೆ ಎಂಬ ಸಂಗತಿ. ಕೂಡಲೇ ರೋಗಿಯನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಿ, ಕಳುಹಿಸಿದ ಚಾಲಕ, ಸ್ಥಳೀಯರ ಜತೆಗೂಡಿ ರಾತ್ರಿ ಪಂಪ್‌ಗೆ ಮುತ್ತಿಗೆ ಹಾಕಿದ್ದಾನೆ.
ಬಂಕ್ಗೆ ಬಿತ್ತು ಬೀಗ
500 ಪೆಟ್ರೋಲ್ ಹಾಕಬೇಕಿದ್ದ ವ್ಯಕ್ತಿ ಕೇವಲ 2.14 ರೂ.ಗೆ ಮಾತ್ರ ಇಂಧನ ತುಂಬಿಸಿದ್ದಾನೆ. ಅಲ್ಲಿಗೆ ಅಳತೆ ಲೆಕ್ಕ 0.02 ಲೀಟರ್ ಎಂದು ಚಾಲಕ ಆರೋಪಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅವ್ಯವಹಾರವನ್ನು ಪರಿಶೀಲಿಸಿ ತಾತ್ಕಾಲಿಕ ಮಟ್ಟಕ್ಕೆ ಬಂಕ್ಗೆ ಬೀಗ ಜಡಿಸಿದ್ದಾರೆ. ಬಂಕ್ ಬಗ್ಗೆ ಈ ಹಿಂದಿನಿಂದಲೂ ಸಾಕಷ್ಟು ದೂರುಗಳು ವ್ಯಕ್ತವಾಗಿದ್ದು, ಇದರ ನಿರ್ವಹಣೆ ಬಗ್ಗೆ ಆರೋಪಗಳಿವೆ ಎಂದು ಸ್ಥಳೀಯರು ವಿಝಿಂಜಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).
ಬಲವಂತದ ಮದುವೆ, ಐಟಂ ಸಾಂಗ್ಗಳಿಂದಲೇ ಜೀವನ; ‘ಸಿಲ್ಕ್’ ಆಗಿ ಮಿಂಚಿದ ಸ್ಮಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ!