ಭಾರತ-ಪಾಕ್​ ಪಂದ್ಯದ ಫೀಸನ್ನು ಬಾಬರ್​ ಅಜಂ​ ಯಾವುದಕ್ಕೆ ಬಳಸಲಿದ್ದಾರೆ ಗೊತ್ತೆ?

babar
Published on

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಬಾಬರ್​ ಅಜಂರ ತಂದೆ ಅಜಂ ಸಿದ್ದಿಖಿ ಅವರು, ತಮ್ಮ ಮಗನಿಗೆ ಭಾರತದ ವಿರುದ್ಧ ಗೆದ್ದ ಟಿ20 ವರ್ಲ್ಡ್​​ ಕಪ್​ ಪಂದ್ಯಕ್ಕೆ ನೀಡುವ ಮ್ಯಾಚ್​ ಫೀಸನ್ನು ಮಹಿಳಾ ಕ್ರಿಕೆಟರ್​ ಬಿಸ್ಮಾ ಅಮ್ಜದ್​ರ ಚಿಕಿತ್ಸೆಗಾಗಿ ಬಳಸಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ(ಪಿಸಿಬಿ)ಗೆ ಮನವಿ ಮಾಡಿದ್ದಾರೆ.

ಕಳೆದ ತಿಂಗಳು ಪಾಕಿಸ್ತಾನದ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿಯಾದ ಬಿಸ್ಮಾಗೆ ಕರಾಚಿಯಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರದ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು, ಕನ್​ಕಶನ್​ ಅನುಭವಿಸಿದ್ದರು. ಆರಂಭಿಕವಾಗಿ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ನಿರಾಕರಿಸಿದ್ದ ಪಿಸಿಬಿ, ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲ್ಪಟ್ಟ ನಂತರ ಅವರ ಆರೋಗ್ಯದ ಜವಾಬ್ದಾರಿ ವಹಿಸುವುದಾಗಿ ಹೇಳಿಕೆ ನೀಡಿತ್ತು.

ಇದೀಗ ಬಾಬರ್​ ಅಜಂರಿಗೆ ಭಾರತ ವಿರುದ್ಧದ ಪಂದ್ಯಕ್ಕೆ ಸಿಗುವ ಭಾರೀ ಮೊತ್ತವನ್ನು ಬಿಸ್ಮಾರ ಚಿಕಿತ್ಸೆಗಾಗಿ ವಿನಿಯೋಗಿಸಬೇಕೆಂದು ಅಜಂ ಸಿದ್ದಿಖಿ ಹೇಳಿದ್ದಾರೆ. "ತಮ್ಮ ಯೂನಿಫಾರಂ ಮೇಲೆ ಪಾಕಿಸ್ತಾನದ ಸ್ಟಾರ್​ ಹಾಕಿಕೊಂಡಿರುವ ಯಾರೊಬ್ಬರು ಅಸಹಾಯಕರಾದರೂ, ದೇಶವೇ ಅಸಹಾಯಕವಾದಂತೆ" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net