ಇವರಿಬ್ಬರು ಡೆಂಜರೆಸ್​ ಬ್ಯಾಟರ್ಸ್​! IPL​ ಸ್ಟಾರ್​ ಆಟಗಾರರನ್ನು ಕೊಂಡಾಡಿದ ಆಸ್ಟ್ರೇಲಿಯಾ ದಿಗ್ಗಜ

ವಿಜಯವಾಣಿ (23)
Published on

IPL 2025: ಐಪಿಎಲ್​ 18ನೇ ಆವೃತ್ತಿಯ ಪ್ರತಿ ಪಂದ್ಯವು ಕುತೂಹಲ, ರೋಚಕತೆಗೆ ಸಾಕ್ಷಿಯಾಗುತ್ತಿದೆ. ಐಪಿಎಲ್​ ಇತಿಹಾಸದಲ್ಲಿ ಬಲಿಷ್ಠ ತಂಡಗಳು ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್​ ರೈಡರ್ಸ್​ ತಂಡಗಳು ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕಿಂತ ಕಳೆಗಿವೆ. ಇದು ಕ್ರಿಕೆಟ್​ ಅಭಿಮಾನಿಗಳು ಮತ್ತು ಮಾಜಿ ಹಿರಿಯ ಕ್ರಿಕೆಟಿಗರ ಅಚ್ಚರಿಗೂ ಕಾರಣವಾಗಿದೆ.

ಐಪಿಎಲ್​ 2025ರ ಸೀಸನ್​ನಲ್ಲಿ 10 ತಂಡಗಳ ಬ್ಯಾಟರ್​ಗಳು ಕೂಡ ಅದ್ಭುತ ಪ್ರದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ರಜತ್​ ಪಟಿದಾರ್​, ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​, ಶ್ರೇಯಸ್​ ಅಯ್ಯರ್​, ಮಹೇಂದ್ರ ಸಿಂಗ್ ಧೋನಿ, ನಿಕೋಲಸ್​ ಪೂರನ್​ ಸೇರಿದಂತೆ ಮುಂತಾದವರು ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇವರೆಲ್ಲರ ಪ್ರದರ್ಶನವನ್ನು ​ ನೋಡುತ್ತಿರುವ ಆಸ್ಟ್ರೇಲಿಯಾ ದಿಗ್ಗಜ, ಮಾಜಿ ಸಿಎಸ್​ಕೆ ಬ್ಯಾಟರ್​ ಮ್ಯಾಥ್ಯೂವ್ ಹೆಡನ್​, ಈ ಬಾರಿಯ ಐಪಿಎಲ್​ನಲ್ಲಿ ಇಬ್ಬರು ಸ್ಫೋಟಕ ಬ್ಯಾಟ್ಸ್​ಮನ್​ಗಳನ್ನು ಹೆಸರಿಸಿದ್ದಾರೆ.

"ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಸನ್​ರೈಸರ್ಸ್ ಹೈದರಾಬಾದ್​ ಓಪನಿಂಗ್ ಬ್ಯಾಟರ್​ಗಳಾದ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್​ ಹೆಡ್​ ಬಹಳ ಡೇಂಜರಸ್​ ಬ್ಯಾಟರ್​ಗಳು. ಟ್ರಾವಿಸ್ ಹೆಡ್ ವೇಗಿಗಳಿಗೆ ಬೆವರಿಳಿಸಿದರೆ, ಅಭಿಷೇಕ್ ಸ್ಪಿನ್ನರ್‌ಗಳಿಗೆ ದುಃಸ್ವಪ್ನವಾಗಿ ಕಾಡಿದರು. ಟ್ರಾವಿಸ್​ ಕ್ರೀಸ್​ಗೆ ಅಂಟಿ ನಿಲ್ಲಲು ಒಂದಷ್ಟು ಸಮಯ ತೆಗೆದುಕೊಂಡರು. ಇವರಿಬ್ಬರು ಆಡಿದ ರೀತಿ ಬಹಳ ಚೆನ್ನಾಗಿತ್ತು. ಆ ರೀತಿಯ ಸ್ಪಷ್ಟತೆ ಟಿ20 ಕ್ರಿಕೆಟ್‌ನಲ್ಲಿ ಅಪರೂಪ" ಎಂದರು.

"ವಿಶೇಷವಾಗಿ ಬೃಹತ್​ ರನ್​ ಗುರಿಯನ್ನು ಬೆನ್ನತ್ತಿದಾಗ ಪ್ರತಿ ಬಾಲ್​ ಕೂಡ ಕೌಂಟ್ ಆಗುತ್ತದೆ. ಮತ್ತು ಒಂದೊಂದು ಓವರ್​ ಮುಗಿಯುತ್ತಿದ್ದಂತೆ ಒತ್ತಡ ಕೂಡ ಹೆಚ್ಚಾಗುತ್ತಲೇ ಇರುತ್ತದೆ. ಆದರೆ, ಇವರಿಬ್ಬರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ರೀತಿ ನಿಜವಾಗಿಯೂ ಗಮನಾರ್ಹ" ಎಂದು ಹೊಗಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net