

ಬೆಂಗಳೂರು: ಮಹಾಮಾರಿ ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವುದು ಸುಳ್ಳಲ್ಲ. ಇದರ ವಿರುದ್ಧ ಹೋರಾಡಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಯುವ ಟೆನಿಸ್ ಆಟಗಾರ ಆದಿಲ್ ಕಲ್ಯಾಣ್‌ಪುರ್, ಮಾಸ್ಕ್ ಧರಿಸಿಕೊಂಡು ಓಡಾಡುವಂತೆ ಜನರಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಮಾಸ್ಕ್ ಆನ್’ ಹೆಸರಿನಲ್ಲಿ ಮ್ಯೂಸಿಕ್ ವಿಡಿಯೋ ತಯಾರಿಸಿದ್ದಾರೆ.
ಆದಿಲ್ ಕಲ್ಯಾಣ್‌ಪುರ್ ಟೆನಿಸ್ ರ‌್ಯಾಪರ್ ಎ-ಕೆಎಎಲ್ ಹೆಸರಿನಲ್ಲಿ ವಿಡಿಯೋ ಹಾಡನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಮಾಡಿದ್ದಾರೆ. ಇದರ ಬೆನ್ನಲ್ಲೇ ಸಾವಿರಾರು ಮಂದಿ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ್ದಾರೆ. ‘ಯೋ ಬ್ರೊ, ವೇರ್ ಇಸ್ ಯುರ್ ಮಾಸ್ಕ್ (ಬ್ರದರ್, ನಿನ್ನ ಮಾಸ್ಕ್ ಎಲ್ಲಿ) ಎಂದು ಶುರುವಾಗುವ ಹಾಡು ಪ್ರತಿಯೊಬ್ಬರು ಇಷ್ಟಪಡುವಂತಿದೆ. ಕೇವಲ ಮಾಸ್ಕ್ ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಶುದ್ಧವಾಗಿಡಿ, ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಹಾಡಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ ದಿನಾಂಕ ಫಿಕ್ಸ್, ಧೋನಿ ಅಭಿಮಾನಿಗಳಲ್ಲಿ ಸಂತಸ
ವೃತ್ತಿಪರ ಟೆನಿಸ್ ಆಟಗಾರನಾಗಿರುವ ಆದಿಲ್ ಕಲ್ಯಾಣ್‌ಪುರ್, ಎರಡು ವರ್ಷಗಳ ಹಿಂದೆ ಎಟಪಿ ಪುರುಷರ ಸಿಂಗಲ್ಸ್ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಅಗ್ರ ಸಾವಿರದೊಳಗೆ ಸ್ಥಾನಕ್ಕೇರಿದ್ದರು. ಸದ್ಯ ಡಬಲ್ಸ್ ವಿಭಾಗದಲ್ಲಿ 624ನೇ ಸ್ಥಾನದಲ್ಲಿದ್ದಾರೆ.