

ದುಬೈ: ಪ್ರಸಕ್ತ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಇತ್ತೀಚೆಗಷ್ಟೇ ಪಾಕಿಸ್ತಾನ ತಂಡವನ್ನು ಭಾರತ (Womens Team India) ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿತು. 6 ವಿಕೆಟ್ಗಳ ಅಂತರದಲ್ಲಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ವನಿತೆಯರಿಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಆದ್ರೆ, ಕಳೆದ ಪಂದ್ಯಗಳಲ್ಲಿ ಸ್ಟಾರ್ ಆಟಗಾರ್ತಿಯರೇ ಅಬ್ಬರಿಸುವಲ್ಲಿ ಮುಗ್ಗರಿಸುತ್ತಿರುವುದು ಇದೀಗ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರರ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಅನ್ನಪೂರ್ಣೇಶ್ವರಿಗೆ ಮಕರರೂಢಾ ಸ್ಕಂದಮಾತಾ ಅಲಂಕಾರ
ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರಾಬಲ್ಯ ಸಾಧಿಸುವಲ್ಲಿ ಎಡವಿದ ಬ್ಯಾಟರ್ ಶಫಾಲಿ ಮತ್ತು ಸೃತಿ ಮಂದಾನ, ತಂಡಕ್ಕೆ ಉತ್ತಮ ಓಪನಿಂಗ್ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ. ಕಳೆದ ಪಂದ್ಯಗಳಲ್ಲಿ ಗುಡ್ ಸ್ಟಾರ್ಟ್ ಕೊಡುವಲ್ಲಿ ಪದೇ ಪದೇ ಮುಗ್ಗರಿಸುತ್ತಿರುವ ಇವರಿಬ್ಬರು, ಅರ್ಧ ಶತಕ ಗಳಿಸಲು ಸಹ ತೀವ್ರ ಪರದಾಡುತ್ತಿದ್ದಾರೆ. ಪ್ರತ್ಯೇಕವಾಗಿ ಈ ವಿಷಯವನ್ನು ಉಲ್ಲೇಖಿಸಿ ಮಾತನಾಡಿದ ಮಾಜಿ ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಶಫಾಲಿ ವರ್ಮ ಮತ್ತು ಸೃತಿ ಮಂದಾನಗೆ ದುಬೈ ಪಿಚ್ ಸರಿ ಹೊಂದುತ್ತಿಲ್ಲ ಎಂಬುದು ಇಲ್ಲಿ ಸ್ಪಷ್ಟ ಎಂದರು.
''ಅಸಲಿಗೆ ಇವರಿಬ್ಬರ ಬ್ಯಾಟಿಂಗ್ ನೋಡಲು ಅದ್ಭುತವಾಗಿರುತ್ತದೆ. ತಂಡದ ಪರ ಓಪನಿಂಗ್ ಬ್ಯಾಟ್ಸ್ಮನ್ಗಳಾಗಿ ಕಣಕ್ಕಿಳಿಯುವ ಶಫಾಲಿ ಮತ್ತು ಸೃತಿ, ಬ್ಯಾಟಿಂಗ್ ಸ್ಕೋರ್ಗೆ ತಕ್ಕಂತೆ ಆಡುತ್ತಿಲ್ಲ. ನಮ್ಮ ಆಟಗಾರರು ಬ್ಯಾಟಿಂಗ್ ಮಾಡಿದ ರೀತಿಗೆ ಕ್ರಿಕೆಟ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).