

ತಮಿಳುನಾಡು: ಸಿನಿ ಲೋಕ ಅಂದಮೇಲೆ ಅಲ್ಲಿ ಫ್ಯಾಶನ್ ಇರಲೇಬೇಕು. ಅದರಲ್ಲೂ ನಟಿಮಣಿಯರ (Actress) ವಿಷಯ ಅಂದಾಕ್ಷಣ ನೋಡುಗರಲ್ಲಿ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ಅದಕ್ಕೆ ಕಾರಣ ಅವರು ಉಡುಗೆ-ತೊಡುಗೆ. ಸ್ಟೈಲಿಶ್ ಆಗಿ, ಗ್ಲಾಮರಸ್ ಬೊಂಬೆಯಾಗಿ ಕಂಗೊಳಿಸುವ ಹೀರೋಯಿನ್ಗಳು, ತಾವು ನಟಿಸುವ ಚಿತ್ರಗಳಲ್ಲಿ ನಿಭಾಯಿಸುವ ಪಾತ್ರಗಳು ಮತ್ತು ಅದಕ್ಕೆ ತಕ್ಕಂತೆ ಧರಿಸುವ ಡ್ರೆಸ್ಗಳು ಸಿನಿಪ್ರಿಯರ ಗಮನಸೆಳೆಯುತ್ತದೆ. ಆದ್ರೆ, ಕೆಲವೊಂದು ದೃಶ್ಯಗಳಲ್ಲಿ ನಟಿಯರು ಧರಿಸುವ ತುಂಡು ಬಟ್ಟೆಗಳು (I Wont Expose) ಪಡ್ಡೆ ಹುಡುಗರ ನಿದ್ದೆಗೆಡಿಸುತ್ತದೆ. ಇಂತಹ ದೃಶ್ಯಗಳು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಮೂಡಿಬಂದಿವೆ. ಒಂದೇ ಮಾತಿನಲ್ಲಿ ಹೇಳೋದಾದರೆ ಇದು ಇತ್ತೀಚಿನ ದಿನಗಳಲ್ಲಿ ತೀರ ಸಾಮಾನ್ಯವಾದ ವಿಷಯ.
ಇದನ್ನೂ ಓದಿ: ಅರುಣಾಚಲೇಶ್ವರದ ದರ್ಶನ ಪಡೆದ ಡಿಕೆಶಿ
ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳಬೇಕೆಂದರೆ ತುಂಡು ಬಟ್ಟೆಯ ಗತಿ. ಆಯಾ ನಟಿಮಣಿಯರು ಇಂತಹ ಉಡುಗೆಗಳಲ್ಲಿ ದೇಹ ಸೌಂದರ್ಯವನ್ನು ಪ್ರದರ್ಶಿಸುವುದು ನೋಡುಗರನ್ನು ಸೆಳೆಯುತ್ತದೆ. ಕೆಲವೇ ಕೆಲವು ನಟಿಯರು ಮಾತ್ರ ಸಿನಿಮಾದಲ್ಲಿ ಇಂತಹ ಸೀನ್ಗಳಿದ್ದರೆ, ತಾವು ಮಾಡುವುದಿಲ್ಲ ಎಂದು ಸುತಾರಾಮ್ ಒಪ್ಪದೆ, ನೇರವಾಗಿ ಆಫರ್ ರಿಜೆಕ್ಟ್ ಮಾಡುತ್ತಾರೆ. ಈ ಸಾಲಿನಲ್ಲಿ ಇದೀಗ ತಮಿಳು, ತೆಲುಗು ಚಿತ್ರನಟಿ ಪ್ರಿಯಾ ಭವಾನಿ ಹೆಸರು ಮುಂಚೂಣಿಯಲ್ಲಿದೆ.
'ಕಲ್ಯಾಣಂ ಕಮಾನೀಯಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಿಯಾ ಭವಾನಿ ನಂತರದಲ್ಲಿ ಕಾಲಿವುಡ್‌ನ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಮ್ಮ ಮುಂದಿನ ಚಿತ್ರ 'ಬ್ಲ್ಯಾಕ್' ಬಗ್ಗೆ ಮಾತನಾಡಿದ ಅವರು, "ಗ್ಲಾಮರಸ್ ಪಾತ್ರದಲ್ಲಿ ನನಗೆ ನಟಿಸುವ ಆಸೆಯಿದೆ. ಆದ್ರೆ. ಪ್ಯಾಶನ್ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ದೇಹ ಪ್ರದರ್ಶನ ಮಾಡುವ ಆಸಕ್ತಿ ಇಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.
"ನನ್ನ ದೇಹ ಒಂದು ವಸ್ತುವಲ್ಲ. ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ನಾನು ಹಾಟ್ ಆಗಿ ಕಾಣಲು ಇಷ್ಟಪಡುವುದಿಲ್ಲ. ನಾನು ಅಂತಹ ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ. ವೃತ್ತಿಜೀವನದಲ್ಲಿ ಒಮ್ಮೆ ನಾನು ಹಿಂತಿರುಗಿ ನೋಡಿದರೆ, ನಾನು ಯಾವ ವಿಷಯಕ್ಕೂ ವಿಷಾದಿಸುವ ಅಗತ್ಯವೇ ಇಲ್ಲ. ಪ್ರತಿಯೊಂದಕ್ಕೂ ಯೋಚಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಏಕೆಂದರೆ, ಅದು ನನ್ನ ವೃತ್ತಿ. ಫ್ಯಾಷನ್ ಹೆಸರಿನಲ್ಲಿ ಇದ್ಯಾವುದನ್ನು ನಾನು ಮಾಡಲಾರೆ" ಎಂದು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).