ಆರ್​ಸಿಬಿಗೆ ತಪ್ಪದ ಕಂಟಕ! ಹೀಗಿದೆ ಸ್ವಿಗ್ಗಿ ಮಾಡಿದ ಮೀಮ್​

WhatsApp-Image-2024-04-08-at-7.04.16-AM
Published on

ಬೆಂಗಳೂರು: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜೆರ್ಸ್​ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್​ ವಿರುದ್ಧ ಕೆಲವೇ ಅಂತರದಲ್ಲಿ ಸೋಲು ಅನುಭವಿಸಿತು. ಸತತ ಸೋಲಿನ ಮೂಲಕ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಕ್ಕೆ ಆರ್​ಸಿಬಿ ವಿರುದ್ಧ ವ್ಯಾಪಕ ಟ್ರೋಲ್ ಹಾಗೂ ಮೀಮ್​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಹೆಸರಾಂತ ಸ್ವಿಗ್ಗಿ ಫುಡ್​ ಕೂಡ ಆರ್​ಸಿಬಿ ತಂಡವನ್ನು ತನ್ನದೇ ಶೈಲಿಯಲ್ಲಿ ಮೀಮ್​ ಮಾಡಿ ಹರಿಬಿಟ್ಟಿದೆ.

ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ, ಈ ಬಾರಿಯ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಡುತ್ತಿರುವ ಪ್ರದರ್ಶನ ಕಂಡು ಹತಾಶೆ ಹೊರಹಾಕಿದೆ. ಶನಿವಾರ (ಏ.6) ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರು ಪಂದ್ಯಗಳಿಂದ ಸೋಲಿನ ಹಾದಿಯಲ್ಲಿದೆ.

ಚೆಪಾಕ್‌ನಲ್ಲಿ ನಡೆದ ಐಪಿಎಲ್ 2024ರ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನೊಂದಿಗೆ ಲೀಗ್ ಅನ್ನು ಪ್ರಾರಂಭಿಸಿತು. ಅದಾದ ನಂತರ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಬಿಟ್ಟರೆ, ಉಳಿದೆಲ್ಲಾ ಮ್ಯಾಚ್​ಗಳನ್ನು ಕೈಚೆಲ್ಲಿತು. ಸದ್ಯ ತಂಡದ ಸೋಲಿನಿಂದ ತೀವ್ರ ಬೇಸರಕ್ಕೆ ಒಳಗಾಗಿರುವ ಅಭಿಮಾನಿಗಳು, ಮುಂಬರುವ ಪಂದ್ಯಗಳಲ್ಲಿ ಆದರೂ ಗೆಲ್ಲುವ ಪ್ರಯತ್ನ ಮಾಡಿ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net