More

    ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

    ಹೆಚ್ಚಿನ ಜನರು ತಮ್ಮ ದೇಹದ ಆರೋಗ್ಯಕ್ಕಿಂತ ಮುಖದ ಆರೋಗ್ಯ, ಸೌಂದರ್ಯದ ಬಗ್ಗೆ ಅತೀಯಾದ ಕಾಳಜಿ ವಹಿಸುತ್ತಾರೆ. ತಮ್ಮ ಮುಖದ ಮೇಲೆ ಒಂದು ಸಣ್ಣ ಗುಳ್ಳೆ ಅಥವಾ ಕಲೆ ಕಂಡುಬಂದರೂ ಚಿಂತಾಕ್ರಾಂತರಾಗುತ್ತಾರೆ. ಅದರ ಬಗ್ಗೆಯೇ ಇಡೀ ದಿನವೆಲ್ಲಾ ಯೋಚನೆ ಮಾಡುತ್ತ, ಯಾವ ಕ್ರೀಮ್​ ಬಳಸಿದರೆ ಹೋಗುತ್ತದೆ, ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಹೊಸ ಪ್ರಾಡೆಕ್ಟ್​ ಯಾವುದು ಎಂದೆಲ್ಲಾ ತಲೆಕಡಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: ಚನ್ನಯ್ಯ ಒಡೆಯರ್ ಅಧಿಕಾರ ಗ್ರಹಣ  ಮೂರು ಬಾರಿ ದಾವಣಗೆರೆ ಲೋಕಸಭೆ ಪ್ರವೇಶಿಸಿದ್ದ ಕುಲಗುರು

    ಹೆಚ್ಚಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ ಸೌಂದರ್ಯ ವರ್ಧಕ ಪ್ರಾಡೆಕ್ಟ್​​ಗಳನ್ನು ಬಳಸುವ ಮೂಲಕ ತಮ್ಮ ಮುಖದ ಕಾಂತಿ, ತ್ವಚೆಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದರಲ್ಲೂ ಅತೀ ಮುಖ್ಯವಾಗಿ ಮುಖದಲ್ಲಿನ ಕಪ್ಪು ಕಲೆಯ ಸಮಸ್ಯೆಯಿಂದ ಬಳಲುವವರು ಇದನ್ನು ಹೋಗಲಾಡಿಸುವುದು ಹೇಗೆ? ಇದರಿಂದ ಮುಕ್ತಿ ಪಡೆಯುವುದು ಹೇಗೆಂದು ಚಿಂತೆ ಮಾಡುತ್ತಾರೆ.

    ಮುಖದಲ್ಲಿನ ಕಪ್ಪು ಕಲೆಗೆ ಮನೆಯಲ್ಲಿ ಬಳಸುವ ಸೌತೆಕಾಯಿ ಮತ್ತು ಆಲೂಗಡ್ಡೆಯೇ ಚಮತ್ಕಾರಿ ಔಷಧ. ಈ ಎರಡು ತರಕಾರಿ ಸಾಕು, ಕಪ್ಪು ಕಲೆಗಳನ್ನು ಹೋಗಲಾಡಿಸಲು. ನಿಮ್ಮ ಮನೆಯಲ್ಲಿಯೇ ಈ ಸರಳ, ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಡಾರ್ಕ್​ ಸ್ಪಾರ್ಟ್​ಗೆ ಗುಡ್​ಬೈ ಹೇಳಬಹುದು.

    ಇದನ್ನೂ ಓದಿ: ಕೇರಳಿಗರು ಕಾಮದಲ್ಲಿ… ರೀಲ್ಸ್​ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ!

    ವಿಧಾನ: 1 ಟೇಬಲ್​ಸ್ಪೂನ್​ ಸೌತೆಕಾಯಿ ರಸ ಮತ್ತು 1 ಟೇಬಲ್​ಸ್ಪೂನ್ ಆಲೂಗಡ್ಡೆಯನ್ನು ಸರಿಯಾಗಿ ಮಿಶ್ರಿಸಿ, ಈ ಪ್ಯಾಕ್​ ಅನ್ನು ಕಪ್ಪು ಕಲೆಯ ಮೇಲೆ ಹಚ್ಚಿ. ಹೀಗೆ ನಿರಂತರವಾಗಿ ಮಾಡಿ. ಇದು ನಿಮ್ಮ ಮುಖವನ್ನು ತೇವಗೊಳಿಸುವುದರ ಜತೆಗೆ ಡಾರ್ಕ್​ ಸ್ಪಾಟ್​ಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts