ಧೋನಿ ಆ ನಡೆ ನನಗೆ ಆಶ್ಚರ್ಯ ತಂದಿತು ಎಂದ ಕಿವಿಸ್​​ ವೇಗಿ ಲಾಕಿ ಫರ್ಗುಸನ್ ! | Lockie Ferguson​

Lockie Ferguson​
Published on

Lockie Ferguson​: 2019 ರ ವಿಶ್ವಕಪ್ ನ್ಯುಜಿಲೆಂಡ್​​ ವಿರುದ್ಧದ ಸೆಮಿಫೈನಲ್‌ನಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಬಗ್ಗೆ ಆಶ್ಚರ್ಯಗೊಂಡಿರುವುದಾಗಿ ನ್ಯೂಜಿಲೆಂಡ್ ಸ್ಟಾರ್ ವೇಗಿ ವೇಗಿ ಲಾಕಿ ಫರ್ಗುಸನ್ ತಿಳಿಸಿದ್ದಾರೆ.

ಕ್ರಿಕ್‌ಟ್ರಾಕರ್‌ ಜೊತೆ ಮಾತನಾಡುವ ವೇಳೆ ಈ ವಿಷಯವಾಗಿ ಸುಮಾರು ಆರು ವಷರ್ಗಳ ನಂತರ ಧೀರ್ಘ ಮೌನ ಮುರಿದಿರುವ ಫರ್ಗುಸನ್, ತಾವು ಎಸೆದ ಆ ಎಸೆತವನ್ನು ಧೋನಿ ಅನಾಯಾಸವಾಗಿ ಬಿಟ್ಟಿದ್ದಕ್ಕೆ ಆಶ್ಚರ್ಯಗೊಂಡಿದ್ದೆ ಎಂದರು. ಮುಂದುವರೆದು ಮಾತನಾಡಿದ ಅವರು, ಧೋನಿಯನ್ನು ಆಕ್ರಮಣಕಾರಿ ಹೊಡೆತಕ್ಕೆ ಪ್ರಚೋದಿಸುವ ಗುರಿಯನ್ನು ಹೊಂದಿದ್ದಾಗಿ ತಿಳಿಸಿದರು. ಆದರೆ ಧೋನಿ ಚೆಂಡನ್ನು ಮುಟ್ಟದೆ ಬಿಟ್ಟರು, ಬೌಲಿಂಗ್ ಮಾಡುವಾಗ ರನ್‌ಗಳನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿರುವಾಗ ಧೋನಿಯಂತಹ ದಿಗ್ಗಜ ಆಟಗಾರ ಆ ಚೆಂಡನ್ನು ಬಾರಿಸಲು ಮುಂದಾಗದಿದ್ದರೆ ಅದು ಒಳ್ಳೆಯದು ಎಂದರು.

ಧೋನಿ ಫರ್ಗುಸನ್ ಅವರ ಎಸೆತವನ್ನು ಮುಟ್ಟದೆ ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡಿದ್ದು, ಫರ್ಗುಸನ್ ಬ್ಯಾಕ್-ಆಫ್-ಎ-ಲೆಂಗ್ತ್ ಎಸೆತವನ್ನು ಹೊರಗೆ ಬೌಲ್ ಮಾಡಿದ್ದರು, ಅದನ್ನು ಧೋನಿ ಮುಟ್ಟದಿರಲು ನಿರ್ಧರಿಸಿದರು, ಇದು ಅಂತಹ ನಿರ್ಣಾಯಕ ಪಂದ್ಯದಲ್ಲಿ ಅವರ ವಿಧಾನದ ಬಗ್ಗೆ ಅನೇಕ ಅನುಮಾನಗಳನ್ನು ಹುಟ್ಟುಹಾಕಿತು.

ಧೋನಿಯ ಆ ನಿರ್ಧಾರದಿಂದ ತಾನು ಎಲ್ಲರಂತೆ ಆಶ್ಚರ್ಯಚಕಿತನಾದೆ ಎಂದು ಫರ್ಗುಸನ್ ನೆನಪಿಸಿಕೊಂಡರು. ಆ ಹಂತದಲ್ಲಿ ಭಾರತಕ್ಕೆ 31 ಎಸೆತಗಳಲ್ಲಿ 52 ರನ್‌ಗಳು ಅವಶ್ಯಕತೆ ಇತ್ತು.

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 18 ರನ್‌ಗಳಿಂದ ಸೋತಿತು, ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತದ ಕೊನೆಯ ಭರವಸೆಯಾಗಿದ್ದ ಧೋನಿಯನ್ನು ಪಂದ್ಯದ ಅಂತಿಮ ಓವರ್‌ನಲ್ಲಿ ಮಾರ್ಟಿನ್ ಗುಪ್ಟಿಲ್ ರನೌಟ್ ಮಾಡಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net