

ಲಕ್ನೋದಲ್ಲಿ ಗುರುವಾರ ನಡೆದ IPL 2025ರ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 42 ರನ್ಗಳಿಂದ ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 231 ರನ್ಗಳ ಬೃಹತ್ ಮೊತ್ತವನ್ನುಗಳಿಸಿತು. ತಂಡದ ಪರ ಇಶಾನ್ ಕಿಶನ್ 48 ಎಸೆತಗಳಲ್ಲಿ ಔಟಾಗದೆ 94 ರನ್ ಗಳಿಸಿದರು.
ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿ 19.5 ಓವರ್ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಸಾಧ್ಯವಾಗಿತು.