

Asia Cup: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾರನ್ನು ಕೈ ಬಿಡಿ ಎಂದು ಹಿರಿಯ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನೊಂದಿಗೆ ಮಾತನಾಡಿದ ಗವಾಸ್ಕರ್, ಭಾರತ ತಂಡಕ್ಕೆ ಮುಂದಿನ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಲಭ್ಯತೆ ತುಂಬಾ ಮುಖ್ಯವಾಗಿದ್ದು, ಅವರನ್ನು ಮಹತ್ವವಲ್ಲದ ಪಂದ್ಯಗಳಾದ ಓಮನ್, ಪಾಕಿಸ್ತಾನದ ವಿರುದ್ಧ ವಿಶ್ರಾಂತಿ ನೀಡಿ, ಉಳಿದ ಆಟಗಾರರಿಗೂ ಅವಕಾಶ ನೀಡಬೇಕು, ಇದರಿಂದಾಗಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್‌ಗೆ ಅವರು ಸಂಪೂರ್ಣವಾಗಿ ಫಿಟ್ ಆಗಿರುತ್ತಾರೆ. ಮುಂದಿನ ಪಂದ್ಯಗಳಿಗೆ ಭಾರತಕ್ಕೆ ಬುಮ್ರಾ ಅಗತ್ಯವಿಲ್ಲ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮಂಬರುವ ಪಂದ್ಯಗಳಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿ, ಯುವ ಆಟಗಾರ ತಿಲಕ್ ವರ್ಮಾಗೆ ಆ ಸ್ಥಾನವನ್ನು ನೀಡಬೇಕು, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಯಾವ ರೀತಿಯಾಗಿ ಪ್ರದರ್ಶನ ನೀಡಬಹುದು ಎನ್ನುವುದನ್ನು ಗಮನಿಸಲು ಇದು ವೇದಿಕೆಯಾಗಲಿದೆ. ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳನ್ನು ಸಿದ್ಧಪಡಿಸುವುದರ ಬಗ್ಗೆ ಆಡಳಿತ ಮಂಡಳಿ ಹೆಚ್ಚಿನ ಗಮನ ಹರಿಸಬೇಕೆಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
ಭಾರತ ತಂಡ ಈಗಾಗಲೇ ಯುಎಇ ಮತ್ತು ಪಾಕಿಸ್ತಾನ ವಿರುದ್ಧ ಜಯಗಳಿಸಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ, ಒಮನ್ ಪಂದ್ಯವು ಉಳಿದ ಆಟಗಾರರಿಗೆ ಅವಕಾಶ ನೀಡಲು ಸೂಕ್ತವಾಗಿದ್ದು, ಉತ್ತಮ ಫಾರ್ಮ್‌ನಲ್ಲಿರುವ ಬುಮ್ರಾ, ಪಾಕಿಸ್ತಾನ ವಿರುದ್ಧ 28 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ, ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ, 72 ಪಂದ್ಯಗಳಲ್ಲಿ 17.67 ಸರಾಸರಿಯಲ್ಲಿ 92 ವಿಕೆಟ್‌ಗಳನ್ನು ಮತ್ತು 6.29 ರ ಎಕಾನಮಿ ಹೊಂದಿದ್ದಾರೆ.
ಬುಮ್ರಾರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ಅರ್ಶ್‌ದೀಪ್ ಸಿಂಗ್ ಅಥವಾ ಹರ್ಷಿತ್ ರಾಣಾಗೆ ಆಡುವ ಹನ್ನೊಂದರ ತಂಡದಲ್ಲಿ ಸ್ಥಾನ ನೀಡಬೇಕು, ಅರ್ಶ್‌ದೀಪ್‌ಗೆ ಈ ಪಂದ್ಯವು ತುಂಬಾ ವಿಶೇಷವಾಗಿದ್ದು, ಕೇವಲ ಒಂದು ವಿಕೆಟ್ ಪಡೆದರೆ ನೂರು ವಿಕೆಟ್ ಸಾಧನೆ ಮಾಡಿದಂತಾಗುತ್ತದೆ.(ಏಜೆನ್ಸೀಸ್)