

India Map : ನೀವು ಭಾರತದ ನಕ್ಷೆಯನ್ನು ಗಮನಿಸಿದ್ದೀರಾ? ಅದರಲ್ಲಿ ಒಂದು ಕುತೂಹಲಕಾರಿ ವಿಚಾರವಿದೆ. ಅದರ ಬಗ್ಗೆ ನೀವು ವಿವರವಾಗಿ ತಿಳಿದುಕೊಂಡರೆ ಖಂಡಿತ ಆಶ್ಚರ್ಯ ಪಡುತ್ತಿರಾ! ಅಷ್ಟಕ್ಕೂ ಆ ಕುತೂಹಲಕಾರಿ ಸಂಗತಿ ಯಾವುದೆಂದರೆ ಅದು ಶ್ರೀಲಂಕಾ.
ಭಾರತದ ನಕ್ಷೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸುವುದೇ ಶ್ರೀಲಾಂಕಾ. ಭಾರತದ ನಕ್ಷೆಯನ್ನು ನೋಡಿದಾಗಲೆಲ್ಲ ಅದರ ಕೆಳಗೆ ಶ್ರೀಲಂಕಾ ಭೂಪಟದ ದರ್ಶನವೂ ನಮಗಾಗುತ್ತದೆ. ಅಷ್ಟಕ್ಕೂ ಒಂದು ದೇಶದ ನಕ್ಷೆಯಲ್ಲಿ ಇನ್ನೊಂದು ದೇಶ ಏಕೆ ಇದೆ ಎಂಬ ಪ್ರಶ್ನೆ ನಿಮ್ಮಲ್ಲಿ ಎಂದಾದರೂ ಮೂಡಿದೆಯೇ? ಹೇಳಬೇಕೆಂದರೆ, ಬಹುತೇಕ ಮಂದಿ ಆ ಬಗ್ಗೆ ಯೋಚನೆಯನ್ನೇ ಮಾಡಿರುವುದಿಲ್ಲ. ಸರಿ, ಹಾಗಾದರೆ, ಶ್ರೀಲಂಕಾ ಭೂಪಟ ಏಕಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ನಮ್ಮ ಗಡಿ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತದ ನಕ್ಷೆಯಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ ಎಂಬುದು ನಿಮಗೆ ತಿಳಿದಿದೆ. ಆದರೆ, ಒಂದು ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಶ್ರೀಲಂಕಾ. ಈ ದೇಶವು ನಮ್ಮ ದೇಶದ ನಕ್ಷೆಯಲ್ಲಿ ಏಕೆ ಗೋಚರಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಈ ದೇಶವು ಅಂತಾರಾಷ್ಟ್ರೀಯ ಕಾನೂನಿನ ಕಾರಣದಿಂದಾಗಿ ನಮ್ಮ ದೇಶದ ನಕ್ಷೆಯಲ್ಲಿ ಗೋಚರಿಸುತ್ತದೆ. ಆ ಅಂತಾರಾಷ್ಟ್ರೀಯ ಕಾನೂನು ಏನು ಎಂಬುದನ್ನು ತಿಳಿಯೋಣ.
1958 ರಲ್ಲಿ ವಿಶ್ವಸಂಸ್ಥೆ (UN) ರಚಿಸಿದ 'ಸಮುದ್ರ ಕಾನೂನು' ಎಂಬ ಅಂತಾರಾಷ್ಟ್ರೀಯ ಕಾನೂನಿನ ಕಾರಣದಿಂದಾಗಿ ಶ್ರೀಲಂಕಾ ಭಾರತದ ನಕ್ಷೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ, ಈ ಕಾನೂನಿನ ವಿಶೇಷತೆ ಏನು, ಈ ಕಾನೂನು ನಿಜವಾಗಿ ಏನು ಹೇಳುತ್ತದೆ? ಎಂಬುದನ್ನು ತಿಳಿಯುವುದಾದರೆ, ಒಂದು ದೇಶದ ಸಮುದ್ರ ಗಡಿಯಿಂದ 200 ನಾಟಿಕಲ್ ಮೈಲುಗಳ (ಸುಮಾರು 370 ಕಿಲೋಮೀಟರ್) ಒಳಗೆ ಬೇರೆ ಯಾವುದೇ ದೇಶಗಳಿದ್ದರೆ, ಆ ದೇಶವು ಅವುಗಳನ್ನು ತನ್ನ ನಕ್ಷೆಯಲ್ಲಿ ತೋರಿಸಬೇಕು ಎಂಬುದು ನಿಯಮ.
ಭಾರತ ಮತ್ತು ಶ್ರೀಲಂಕಾ ನಡುವಿನ ಅಂತರ ಎಷ್ಟು ಗೊತ್ತಾ? ಇದು ಕೇವಲ 18 ನಾಟಿಕಲ್ ಮೈಲುಗಳು. ಅಂದರೆ, ಸುಮಾರು 54.8 ಕಿಲೋಮೀಟರ್. ಇದು ವಿಶ್ವಸಂಸ್ಥೆ ನಿಗದಿಪಡಿಸಿದ 200 ನಾಟಿಕಲ್ ಮೈಲುಗಳ ಮಿತಿಯೊಳಗೆ ಇದೆ. ಅದಕ್ಕಾಗಿಯೇ ಭಾರತವು ತನ್ನ ನಕ್ಷೆಯಲ್ಲಿ ಶ್ರೀಲಂಕಾವನ್ನು ತೋರಿಸುತ್ತದೆ. ನಿಮಗೆ ತಿಳಿದಿದೆಯೇ? ಪ್ರಪಂಚದ ಬೇರೆ ಯಾವುದೇ ದೇಶವು ತನ್ನ ನೆರೆಯ ದೇಶವನ್ನು ತನ್ನ ನಕ್ಷೆಯಲ್ಲಿ ತೋರಿಸುವುದಿಲ್ಲ. ಆದರೆ, ಭಾರತವು ಈ ನಿಯಮದಿಂದಾಗಿ, ಶ್ರೀಲಂಕಾವನ್ನು ತನ್ನ ನಕ್ಷೆಯಲ್ಲಿ ತೋರಿಸುತ್ತದೆ. ಇದು ಭಾರತದ ನಕ್ಷೆಯಲ್ಲಿನ ಶ್ರೀಲಂಕಾದ ಕಥೆ. (ಏಜೆನ್ಸೀಸ್)