

ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಹಾಗೂ ಅನುಭವಿ ಕ್ರೀಡಾಪಟು ಸುನಿಲ್ ಚೇತ್ರಿ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಸಜ್ಜಾಗಿದ್ದು, ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಜೂನ್ 6ರಂದು ನಡೆಯಲಿರುವ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತು ನನ್ನ ವೃತ್ತಿ ಜೀವನದ ಕೊನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತದಲ್ಲಿ ಫುಟ್ಬಾಲ್ ಆಟಕ್ಕೆ ಹೆಚ್ಚು ಪ್ರಾಶಸ್ತ್ಯ ತಂದುಕೊಟ್ಟ ಚೇತ್ರಿ, ಈ ಕ್ರೀಡೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿ, ಅಪಾರ ಸಂಖ್ಯೆಯ ಫುಟ್ಬಾಲ್ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನುಭವಿ ಆಟಗಾರ ಬರೋಬ್ಬರಿ 150 ಪಂದ್ಯಗಳಲ್ಲಿ 94 ಗೋಲ್ಗಳನ್ನು ದಾಖಲಿಸಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ಗೋಲ್-ಸ್ಕೋರರ್ಗಳ ಸಾರ್ವಕಾಲಿಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಇದೀಗ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಜೂನ್ 6ರಂದು ನಡೆಯಲಿರುವ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತು ನನ್ನ ಕಡೆಯ ಲೀಗ್ ಹಾಗೂ ಕ್ರೀಡಾ ವೃತ್ತಿಯ ಅಂತಿಮ ಘಟ್ಟ ಎಂದು ಹೇಳುವ ಮೂಲಕ ಫುಟ್ಬಾಲ್ ಲೋಕಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೃಹತ್ ಅಭಿಮಾನಿ ಬಳಗ ವ್ಯಾಪಕ ಬೇಸರ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದ ತುಂಬ 'ಥ್ಯಾಂಕ್ಯೂ ಲೆಜೆಂಡ್' ಎಂಬ ಧನ್ಯವಾದಗಳ ಸಂದೇಶಗಳನ್ನು ತಿಳಿಸಿದ್ದಾರೆ,(ಏಜೆನ್ಸೀಸ್).