ಬಾಂಗ್ಲಾದೇಶ ಲೆಜೆಂಡ್ಸ್ ತಂಡವನ್ನು ಮಣಿಸಿದ ಶ್ರೀಲಂಕಾ ಲೆಜೆಂಡ್ಸ್ ತಂಡ

tharanga for web
Published on

ರಾಯ್‌ಪುರ: ಉಪುಲ್ ತರಂಗ (99*ರನ್, 47 ಎಸೆತ, 11 ಬೌಂಡರಿ, 5 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಶ್ರೀಲಂಕಾ ಲೆಜೆಂಡ್ಸ್ ತಂಡ ‘ರಸ್ತೆ ಸುರಕ್ಷತಾ ವರ್ಲ್ಡ್ ಸಿರೀಸ್’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು 42 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ನಾಲ್ಕನೇ ಜಯ ದಾಖಲಿಸಿದ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡ ಹ್ಯಾಟ್ರಿಕ್ ಸೋಲು ಕಂಡಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 6 ವಿಕೆಟ್‌ಗೆ 180 ರನ್ ಪೇರಿಸಿದರೆ, ಪ್ರತಿಯಾಗಿ ಬಾಂಗ್ಲಾದೇಶ ತಂಡ, ನಜಿಮುದ್ದೀನ್ (54ರನ್, 41 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 6 ವಿಕೆಟ್‌ಗೆ 138 ರನ್ ಪೇರಿಸಲಷ್ಟೇ ಶಕ್ತವಾಯಿತು.

ಶ್ರೀಲಂಕಾ ಲೆಜೆಂಡ್ಸ್: 6 ವಿಕೆಟ್‌ಗೆ 180 (ಉಪುಲ್ ತರಂಗ 99*, ದಿಲ್ಶಾನ್ 33, ಚಾಮರ ಸಿಲ್ವಾ 24, ಮೊಹಮದ್ ಶಾರೀಫ್ 30ಕ್ಕೆ 1), ಬಾಂಗ್ಲಾದೇಶ ಲೆಜೆಂಡ್ಸ್: 6 ವಿಕೆಟ್‌ಗೆ 138 (ನಜೀಮುದ್ದೀನ್ 54, ಮೆಹ್ರಾಬ್ ಹುಸೇನ್ 27, ಖಾಲೀದ್ ಮಶೂದ್ 28*, ಧಮಿಕಾ ಪ್ರಸಾದ್ 22ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net