

ನವದೆಹಲಿ: ಭಾರತ ತಂಡದ ಮುಖ್ಯಕೋಚ್ ರವಿ ಶಾಸ್ತ್ರಿಗೂ 36 ಸಂಖ್ಯೆಗೂ ಅವಿನಾಭವ ಸಂಬಂಧ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 36 ಸಂಖ್ಯೆಯ ಮಹತ್ವವನ್ನು ಶಾಸ್ತ್ರಿ ಹೇಳಿಕೊಂಡಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿಯೂ ಈ ಸಂಖ್ಯೆ ಕುರಿತು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಹಲವು ಬಾರಿ 36 ರನ್‌ಗಳಿಸಿದ್ದರ ಬಗ್ಗೆ ಉಲ್ಲೇಖಿಸಿರುವ ಶಾಸ್ತ್ರಿ, ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ 36 ರನ್ ಗಳಿಸಿದ್ದು, ಅಡಿಲೇಡ್‌ನಲ್ಲಿ ಭಾರತ 36 ರನ್‌ಗಳಿಗೆ ಕುಸಿತ ಕಂಡಿದ್ದು, ಇಡೀ ಇನಿಂಗ್ಸ್ ಆಡಿದರೂ ಗಾವಸ್ಕರ್ 36 ರನ್ ಗಳಿಸಿದ್ದನ್ನು ರವಿಶಾಸ್ತ್ರಿ ನೆನಪಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಜಯಿಸಿ ಬುಧವಾರಕ್ಕೆ 36 ವಸಂತ ಪೂರೈಸಿದೆ. ಈ ಕುರಿತು ರವಿಶಾಸ್ತ್ರಿ 36 ಸಂಖ್ಯೆ ಕುರಿತು ವಿವರಣೆ ನೀಡಿದ್ದಾರೆ.
1984-85ನೇ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ರವಿ ಶಾಸ್ತ್ರಿ ಬರೋಡ ಎದುರು ಓವರ್ ಒಂದರಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಇದು ಇಂದಿನ ಮಟ್ಟಿಗೆ ಭಾರತದಲ್ಲಿ ದಾಖಲೆಯಾಗಿಯೇ ಉಳಿದಿದೆ. ಇದಾದ ಬಳಿಕ 2007ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ 6 ಸಿಕ್ಸರ್ ಸಿಡಿಸಿದ್ದರು. ಈ ವೇಳೆ ರವಿಶಾಸ್ತ್ರಿಯೇ ವೀಕ್ಷಕ ವಿವರಣೆ ನೀಡುತ್ತಿದ್ದರು. ಅಲ್ಲದೆ, 1975ರ ಚೊಚ್ಚಲ ವಿಶ್ವಕಪ್‌ನಲ್ಲಿ ಗಾವಸ್ಕರ್ 174 ಎಸೆತ ಎದುರಿಸಿದರೂ ಕೇವಲ 36 ರನ್‌ಗಳಿಸಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾದ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ರವಿ ಶಾಸ್ತ್ರಿ ಮಾರ್ಗದರ್ಶನದ ಭಾರತ ಕೇವಲ 36 ರನ್‌ಗಳಿಗೆ ಸರ್ವಪತನ ಕಂಡಿತ್ತು. ವೃತ್ತಿಜೀವನದಲ್ಲಿ 36 ಸಂಖ್ಯೆ ಎದುರಾದ ಕುರಿತು ರವಿ ಶಾಸ್ತ್ರಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ಟೇಕ್ ನಲ್ಲಿ ಮೂಡಿ ಬಂದಿದೆ ಪಾರಿವಾಳ
ಕಳೆದ ವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 3-1 ರಿಂದ ಜಯಿಸಿ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು. ಜೂನ್ 18 ರಿಂದ 22 ರವರೆಗೆ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಎದುರಾಗಲಿವೆ. ಜೂನ್ 23 ರಂದು ಮೀಸಲು ದಿನವಾಗಿರಲಿದೆ.