ಸಿರಾಜ್ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ - 55 ರನ್​ಗೆ ಆಲ್​ಔಟ್​..

siraj
Published on

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ಬೆಂಗಳೂರು ಬೆಸ್ಟ್ ಬೋಲರ್​ಎಂದೇ ಪ್ರಸಿದ್ಧಿ ಪಡೆದಿರುವ ಮಹಮ್ಮದ್ ಸಿರಾಜ್​ ಮಾರಕ ದಾಳಿಗೆ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡ 55 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿದೆ.

ದೊಡ್ಡ ಮೊತ್ತ ಕಲೆ ಹಾಕುವ ಉದ್ದೇಶದಿಂದ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಡೀನ್‌ ಎಲ್ಗರ್ ನಾಯತ್ವದ ದಕ್ಷಿಣ ಆಫ್ರಿಕಾ ತಂಡ 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಮುಗಿಸಿದೆ.

ಇನ್ಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಬೆಡಿಂಗ್‌ಹ್ಯಾಮ್‌ (12) ಮತ್ತು ಕೈಲ್‌ ವೆರೆನ್ನೆ (15) ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್​ಮನ್​ಗಳು ಯಾರೂ ಎರಡಂಕಿ ದಾಟಲಿಲ್ಲ. 6 ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್‌, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಸಿರಾಜ್‌ ವೇಗಕ್ಕೆ ಜೊತೆಯಾದ ಜಸ್ಪ್ರೀತ್ ಬೂಮ್ರಾ ಮತ್ತು ಮುಖೇಶ್‌ ಕುಮಾರ್‌ ಕೂಡಾ ತಲಾ ಎರಡು ವಿಕೆಟ್‌ ಪಡೆದರು. 9 ಓವರ್‌ ಬೌಲಿಂಗ್‌ ಮಾಡಿದ ಸಿರಾಜ್‌ 6 ವಿಕೆಟ್‌ ಕಬಳಿಸಿ 15 ರನ್‌ ಮಾತ್ರ ಕೊಟ್ಟುರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net