More

    ಕುಸ್ತಿಪಟುಗಳ ಜಂಗೀಕುಸ್ತಿ: ಹಿರಿಯರ ವಿರುದ್ಧ ಕಿರಿಯರ ಧರಣಿ!

    ನವದೆಹಲಿ: ಹಿರಿಯ ಕುಸ್ತಿಪಟುಗಳು ಒಂದು ವರ್ಷದಿಂದ ನಡೆಸುತ್ತಿರುವ ಧರಣಿಯಿಂದಾಗಿ ನಮ್ಮ ಭವಿಷ್ಯಕ್ಕೆ ಕುತ್ತು ಬರುತ್ತಿದೆ ಎಂದು ಕಿರಿಯ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ತಂಗಿ ಮದುವೆಗೆ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಆನ್​ಲೈನ್​ ಗೇಮ್​ಗೆ ಸುರಿದ ವಿದ್ಯಾರ್ಥಿ!
    ಹಿರಿಯ ಕುಸ್ತಿ ಪಟುಗಳಾದ ಭಜರಂಗ್, ಸಾಕ್ಷಿ , ವಿನೇಶಾ ನಡೆಸುತ್ತಿರುವ ಪ್ರತಿಭಟನೆಯಿಂದ ಕುಸ್ತಿ ಕ್ರೀಡೆ ಸೊರಗುವಂತಾಗಿದೆ. ಇವರಿಂದ ಕುಸ್ತಿ ಮತ್ತು ನಮ್ಮನ್ನು ರಕ್ಷಿಸಿ ಎಂದು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಿದರು.

    ದೆಹಲಿ, ಹರಿಯಾಣ, ಉತ್ತರ ಪ್ರದೇಶದಿಂದ ಬಂದ ನೂರಾರು ಕಿರಿಯ ಕುಸ್ತಿಪಟುಗಳು ಬುಧವಾರ ದೆಹಲಿಯಲ್ಲಿ ಹಿರಿಯ ಕುಸ್ತಿಪಟುಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸುಮಾರು 300ಕ್ಕೂ ಹೆಚ್ಚು ಕುಸ್ತಿಪಟುಗಳು ಧರಣಿಯಲ್ಲಿ ಭಾಗವಹಿಸಿದ್ದರು. ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಬಜರಂಗ್, ಸಾಕ್ಷಿ ಹಾಗೂ ವಿನೇಶಾ ಕಳೆದ ಒಂದು ವರ್ಷದಿಂದ ಇದೇ ಸ್ಥಳದಲ್ಲಿ ಧರಣಿ ನಡೆಸಿದ್ದರು.
    ಇದೀಗ ಅದೇ ಸ್ಥಳದಲ್ಲಿ ಈ ಮೂವರ ವಿರುದ್ಧವೇ ಧರಣಿ ನಡೆಯುತ್ತಿದೆ. ಕುಸ್ತಿ ಫೆಡರೇಷನ್‌ನ್ನು ಅಮಾನತಿನಲ್ಲಿರಿಸಿದ ಕೇಂದ್ರ ಕ್ರೀಡಾ ಸಚಿವಾಲಯ, ಸದ್ಯ ಅಡ್‌ಹಾಕ್ ಸಮಿತಿಯನ್ನು ರಚಿಸಿದೆ.

    ಧರಣಿ ನಡೆಸಿದ ಕಿರಿಯ ಕುಸ್ತಿಪಟುಗಳು ಕುಸ್ತಿ ಫೆಡರೇಷನ್‌ ಮೇಲಿನ ಅಮಾನತನ್ನು ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಅಬಕಾರಿ ನೀತಿ ಪ್ರಕರಣ: ಮೂರನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts