More

    ತಂಗಿ ಮದುವೆಗೆ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಆನ್​ಲೈನ್​ ಗೇಮ್​ಗೆ ಸುರಿದ ವಿದ್ಯಾರ್ಥಿ!

    ಲಖನೌ(ಉತ್ತರಪ್ರದೇಶ): ಆನ್​ಲೈನ್ ಗೇಮ್​, ಜೂಜಾಟವು ಯುವಕರು, ಮಕ್ಕಳೆನ್ನದೆ ಎಲ್ಲರನ್ನೂ ಹಾಳುಗೆಡವುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕಾಣಬಹುದು. ಗೇಮ್​ ಆ್ಯಪ್​ಗಳ ಮೂಲಕ ಜೂಜಾಟದಲ್ಲಿ ತೊಡಗುತ್ತಿರುವ ಅಮಾಯಕ ಯುವಜನರು ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳುತ್ತಿದ್ದು, ಮನೆಯಲ್ಲಿ ಸಿಕ್ಕ ಹಣ, ಆಭರಣ ಏನನ್ನೂ ಬಿಡದೆ ಹೊತ್ತೊಯ್ದು ಮಾರಿ ಇಡೀ ಕುಟುಂಬವನ್ನು ನರಕದ ಕೂಪಕ್ಕೆ ತಳ್ಳುತ್ತಿದ್ದಾರೆ.

    ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಮೂರನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು!

    ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಘೂಗಲ್‌ಪುರ ಗ್ರಾಮದ ಯುವಕ ತನ್ನ ಸಹೋದರಿಯ ಮದುವೆಗಾಗಿ ಕುಟುಂಬ ಸದಸ್ಯರು ಸಂಗ್ರಹಿಸಿದ್ದ 5.5 ಲಕ್ಷ ರೂ.ಗಳನ್ನು ಆನ್​ಲೈನ್ ಗೇಮ್​ ಆಡಿ ಕಳೆದುಕೊಂಡು ಮನೆಯವರು ದಿಗ್ಭ್ರಾಂತಿಗೆ ಒಳಗಾಗುವಂತೆ ಮಾಡಿದ್ದಾನೆ.

    ಆನ್‌ಲೈನ್ ಗೇಮ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಇಟಾವಾ ಜಿಲ್ಲೆಯ ಘೂಗಲ್‌ಪುರದ ಅಂಕಿತ್ ಯಾದವ್ ಹಣ ಕಳೆದುಕೊಂಡು ಪಾಲಕರ ಬೈಗುಳ ತಪ್ಪಿಸಿಕೊಳ್ಳಲು ದುಷ್ಕರ್ಮಿಗಳು ನನ್ನನ್ನು ಕಾರಿನಲ್ಲಿ ಅಪಹರಿಸಿ, ಹಣ ಕಸಿದುಕೊಂಡಿದ್ದಾರೆ ಎಂದು ಕಥೆ ಕಟ್ಟಿ ಹೇಳಿದ್ದ. ಆದರೆ ಈತನ ಬಗ್ಗೆ ಅನುಮಾನಗೊಂಡು ಕುಟುಂಬದವರು ಸಂಬಂಧಿ ಸಂಜೀವಕುಮಾರ್ ಯಾದವ್ ಗೆ ತಿಳಿಸಿದ್ದಾರೆ. ಆತ ಪೊಲೀಸರಿಗೆ ದೂರು ನೀಡಿದ್ದು, ತನಿಖೆಯಲ್ಲಿ ಆನ್​ಲೈನ್​ ಗೇಮ್​ನಲ್ಲಿ ಹಣ ಕಳೆದುಕೊಂಡಿರುವ ಸತ್ಯ ಬಹಿರಂಗವಾಗಿದೆ.

    ರಕ್ತಪರೀಕ್ಷೆಯಿಲ್ಲದೇ ಮಧುಮೇಹ ಪತ್ತೆಹಚ್ಚುವ ಸಾಧನ ಆವಿಷ್ಕರಿಸಿದ ಭಾರತೀಯ ವಿಜ್ಞಾನಿ! ವಿವರ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts