More

    ರಕ್ತಪರೀಕ್ಷೆಯಿಲ್ಲದೇ ಮಧುಮೇಹ ಪತ್ತೆಹಚ್ಚುವ ಸಾಧನ ಆವಿಷ್ಕರಿಸಿದ ಭಾರತೀಯ ವಿಜ್ಞಾನಿ! ವಿವರ ಇಲ್ಲಿದೆ ನೋಡಿ..

    ನವದೆಹಲಿ: ಮಧುಮೇಹವು ದೇಶದ ಲಕ್ಷಾಂತರ ಜನರನ್ನು ಬಾಧಿಸುವ ಕಾಯಿಲೆಯಾಗಿದೆ. ಇತ್ತೀಚೆಗೆ 18 ವರ್ಷದೊಳಗಿನವರೂ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ರೋಗವನ್ನು ಪತ್ತೆಹಚ್ಚಲು ಸೂಜಿಯನ್ನು ರಕ್ತನಾಳಕ್ಕೆ ಚುಚ್ಚಿ ದೇಹದಿಂದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. ಇದು ರೋಗಿಗೆ ನೋವಿಗೆ ಕಾರಣವಾಗುತ್ತದೆ. ಇದಲ್ಲದೆ, ಕೆಲವರು ಸೂಜಿಗಳ ಭಯದಿಂದ ನಡುಗುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ವಿಜ್ಞಾನಿ ಪೂಸಾ ಚಿರಂಜೀವಿ ಶ್ರೀನಿವಾಸ ರಾವ್ ದೇಹಕ್ಕೆ ಸೂಜಿ ಅಳವಡಿಸಿ ರಕ್ತ ತೆಗೆಯುವುದಕ್ಕೆ ಬದಲಾಗಿ ಕಡಿಮೆ ವೆಚ್ಚದಲ್ಲಿ ಮಧುಮೇಹ ಪರೀಕ್ಷೆ ಸಾಧನವನ್ನು ಕಂಡುಹಿಡಿದಿದ್ದಾರೆ.

    ಇದನ್ನೂ ಓದಿ: ಮೊಬೈಲ್​ಗಾಗಿ ಕರೆಂಟ್​ ಲೆಕ್ಕಿಸದೆ ನಮ್ಮಮೆಟ್ರೊ ಹಳಿಗೆ ಹಾರಿದ ಮಹಿಳೆ.. ಮುಂದೆನಾಯ್ತು?

    ಶ್ರೀನಿವಾಸ ರಾವ್ ಎರಡು ವರ್ಷ ಸಾಧನವನ್ನು ಪರೀಕ್ಷೆ ನಡೆಸಿದ್ದಾರೆ. ಬೆವರಿನ ಮೂಲಕವೇ ಮಧುಮೇಹವನ್ನು ಪತ್ತೆ ಮಾಡುವ ಎಲೆಕ್ಟ್ರೋಕೆಮಿಕಲ್ ಸಾಧನ ಇದಾಗಿದೆ. ಇದನ್ನು ಕಂಡುಹಿಡಿದ ನಂತರ ಭಾರತೀಯ ಪೇಟೆಂಟ್ ಪ್ರಾಧಿಕಾರವು ಡಿ.29 ರಂದು ಪೇಟೆಂಟ್ ಹಕ್ಕುಗಳನ್ನು ನೀಡಿದೆ.
    ಬಡ ಕುಟುಂಬದಲ್ಲಿ ಹುಟ್ಟಿದ ಶ್ರೀನಿವಾಸ ರಾವ್ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದಿ, ಆಂಧ್ರ ವಿಶ್ವವಿದ್ಯಾಲಯದಲ್ಲಿ ಪಿಜಿ, ನಂತರ ಪಿಎಚ್‌ಡಿ ಮಾಡಿ, ಪ್ರಸ್ತುತ ಕಾನ್ಪುರದ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಖಚಿತಪಡಿಸಿಕೊಳ್ಳಲು ರಕ್ತವನ್ನು ತೆಗೆದುಕೊಳ್ಳದೆಯೇ ಬೆವರು ಪರೀಕ್ಷೆಯ ಮೂಲಕ ಈ ಸಾಧನದಿಂದ ಒಂದು ನಿಮಿಷದಲ್ಲಿ ಮಧುಮೇಹವನ್ನು ಲೆಕ್ಕಹಾಕಬಹುದು. ಈ ಸಾಧನ ಲಭ್ಯವಾದರೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ತುಂಬಾ ಉಪಯೋಗವಾಗಲಿದ್ದು, ವೆಚ್ಚವೂ ಕಡಿಮೆಯಾಗಲಿದೆ ಎಂದು ಶ್ರೀನಿವಾಸ ರಾವ್ ಹೇಳುತ್ತಾರೆ.

    ಅಮೆರಿಕದಲ್ಲಿ ಭಾರತೀಯ ಕುಟುಂಬ ಸಾವು ಪ್ರಕರಣ: ಪತ್ನಿ, ಮಗಳನ್ನು ಕೊಂದು ರಾಕೇಶ್ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts