

ನ್ಯೂಯಾರ್ಕ್: ಕಳೆದ ವಾರ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ಭಾರತೀಯ ಮೂಲದ ಶ್ರೀಮಂತ ದಂಪತಿ ಮತ್ತು ಅವರ ಮಗಳ ಸಾವು ಶವಪರೀಕ್ಷೆಯ ನಂತರ ಕೊಲೆ ಮತ್ತು ಆತ್ಮಹತ್ಯೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ.
ರಾಕೇಶ್ ಕಮಲ್(57), ಅವರ ಪತ್ನಿ ಟೀನಾ ಕಮಲ್(54) ಮತ್ತು ಅವರ ಪುತ್ರಿ ಅರಿಯಾನ್ನಾ ಕಮಲ್(18) 2023ರ ಡಿ.28 ರಂದು ಮ್ಯಾಸಚೂಸೆಟ್ಸ್‌ನ ಡೋವರ್‌ನಲ್ಲಿರುವ ಅವರ 5 ಮಿಲಿಯನ್ ಯುಎಸ್‌ಡಿ ಬೆಲೆ ಬಾಳುವ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ನಾರ್ಫೋಕ್ ಡಿಸ್ಟ್ರಿಕ್ಟ್ ಅಟಾರ್ನಿ ಮೈಕೆಲ್ ಮೊರಿಸ್ಸೆ ಅವರ ಕಚೇರಿಯಿಂದ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿ ನೀಡಿದ ಶವಪರೀಕ್ಷೆ ಫಲಿತಾಂಶಗಳು ಟೀನಾ ಮತ್ತು ಅವರ ಮಗಳು ಅರಿಯಾನ್ನಾ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ದೃಢಪಡಿಸುತ್ತದೆ. ರಾಕೇಶ್ ತನ್ನಷ್ಟಕ್ಕೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾರೆ. ಅಂತಿಮ ಶವಪರೀಕ್ಷೆ ವರದಿ ಮುಂದಿನ ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬಂದೂಕಿನ ಪೂರ್ಣ ಫೊರೆನ್ಸಿಕ್ ಮತ್ತು ಬ್ಯಾಲಿಸ್ಟಿಕ್ಸ್ ಪರೀಕ್ಷೆಯನ್ನು ಅಂತಿಮಗೊಳಿಸಲಾಗಿಲ್ಲ. ರಾಕೇಶ್ ಬಳಿ ಕಂಡುಬಂದ ಬಂದೂಕು 40 ಕ್ಯಾಲಿಬರ್ ಗ್ಲೋಕ್ 22 ನದ್ದಾಗಿದೆ. ಆದರೆ ಬಂದೂಕು ರಾಕೇಶ್ ಹೆಸರಿನಲ್ಲಿ ನೋಂದಾಯಿಸಲಾಗಿಲ್ಲ. ಅವರು ಅದನ್ನು ಹೊಂದಲು ಪರವಾನಗಿ ಸಹ ಪಡೆದಿಲ್ಲ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ.
ಬಂದೂಕಿನ ಮೂಲವನ್ನು ನಿರ್ಧರಿಸುವಲ್ಲಿ ಸಹಾಯಕ್ಕಾಗಿ ಮಸಾಚುಸೆಟ್ಸ್ ಸ್ಟೇಟ್ ಪೋಲೀಸ್ ಆಲ್ಕೋಹಾಲ್, ತಂಬಾಕು, ಬಂದೂಕುಗಳು ಮತ್ತು ಸ್ಫೋಟಕಗಳ ಬ್ಯೂರೋವನ್ನು ಸಂಪರ್ಕಿಸಿದೆ. ಈ ಘಟನೆಯು ಡೋವರ್ ಮತ್ತು ಮ್ಯಾಸಚೂಸೆಟ್ಸ್ ಸ್ಟೇಟ್ ಪೋಲೀಸರ ತನಿಖೆಯಲ್ಲಿದೆ.
ಕಳೆದ ವಾರ ಮೊರಿಸ್ಸೆ ಪೊಲೀಸರ ಪ್ರಾಥಮಿಕ ತನಿಖೆಯು ಘಟನೆಯು ಕೌಟುಂಬಿಕ ಹಿಂಸಾಚಾರದ ಪ್ರಕರಣವೆಂದು ದಾಖಲಿಸಿಕೊಂಡಿತ್ತು. ಹೊರಗಿನವರು ಕೊಲೆ ಮಾಡಿರುವ ಸಾಧ್ಯತೆಯಿಲ್ಲ ಎಂದು ಎಂದು ಅಭಿಪ್ರಾಯಪಟ್ಟಿತ್ತು.
ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ನೈಋತ್ಯಕ್ಕೆ 32 ಕಿಲೋಮೀಟರ್ ದೂರದಲ್ಲಿರುವ 5 ಮಿಲಿಯನ್ ಯುಎಸ್‌ಡಿ ಬೆಲೆ ಬಾಳುವ ಬಂಗಲೆಯಲ್ಲಿ ದಮಪತಿ ಮತ್ತು ಅವರ ಪುತ್ರಿ ಶವವಾಗಿ ಪತ್ತೆಯಾಗಿದ್ದರು.