More

    ಕಾರ್ಯಕ್ಷಮತೆ, ಸಮಯೋಚಿತ ಸೇವೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸೂಪರ್: ವಿಶ್ವದಲ್ಲೇ 3ನೇ ರ‍್ಯಾಂಕ್!

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕವಾಗಿ 3ನೇ ರ‍್ಯಾಂಕ್ ಪಡೆದಿದೆ.
    ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸಮಯೋಚಿತ ಸೇವೆಗಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳ ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಕೇಂದ್ರೀಕರಿಸಿದ ‘ಸಿರಿಯಮ್’ ಬಿಡುಗಡೆ ಮಾಡಿದ ವರದಿಯು ಬಿಡುಗಡೆ ಮಾಡಿದ ವಿಶ್ವದ ಅಗ್ರ 10 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

    ಇದನ್ನೂ ಓದಿ: ಜಪಾನ್ ಭೂಕಂಪಕ್ಕೆ ಎನ್​ಟಿಆರ್ ​ ಶಾಕ್!

    ಶೇ. 84.08 ಅಂಕ ಗಳಿಸುವ ಮೂಲಕ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟರೀಯ ವಿಮಾನ ನಿಲ್ದಾಣವು ಅತ್ಯುತ್ತಮವಾದವುಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದರೆ, ಅಮೆರಿಕದ ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್ ವಿಮಾನ ನಿಲ್ದಾಣ ಕ್ರಮವಾಗಿ ಮೊದಲು ಮತ್ತು 2ನೇ ಸ್ಥಾನ ಪಡೆದುಕೊಂಡಿವೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣವು ಶೇ 83.91 ರಷ್ಟು ಅಂಕ ಗಳಿಸಿ ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳಲ್ಲಿ 9 ನೇ ಸ್ಥಾನದಲ್ಲಿದೆ.

    ಇಂಡಿಗೋ ವಿಮಾನಯಾನ ಸಂಸ್ಥೆಯು ಭಾರತದಲ್ಲಿ ಅತಿ ಹೆಚ್ಚು ವಿಮಾನ ಸಂಚಾರ ಹೊಂದಿ ಮುಂಚೂಣಿಯಲ್ಲಿದೆ. ಇದು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳಲ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದೆ. ವಾಯುಯಾನ ಉದ್ಯಮದಲ್ಲಿ ದೇಶದ ಬೆಳೆಯುತ್ತಿರುವ ಪ್ರಭಾವವನ್ನು ಇದು ಒತ್ತಿಹೇಳಿದೆ.
    ‘ಸಿರಿಯಮ್‌’ನ ಮೌಲ್ಯಮಾಪನವು ಆಗಮನ ಅಥವಾ ನಿರ್ಗಮನದಲ್ಲಿ 15-ನಿಮಿಷದ ವಿಳಂಬವನ್ನು ಸಮಯಪಾಲನೆಯ ಮೇಲೆ ಪರಿಣಾಮ ಬೀರುವ ಅಂಶವೆಂದು ಪರಿಗಣಿಸಿದೆ. ಜಾಗತಿಕ ಮಟ್ಟದಲ್ಲಿ ವಾಯುಯಾನ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಅನ್ವಯಿಸಲಾದ ಕಠಿಣ ಮಾನದಂಡಗಳನ್ನು ಇದು ಒಳಗೊಂಡಿದೆ.

    ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದೊರೆತಿರುವ ಮೂರನೇ ಸ್ಥಾನವು ವಿಮಾನ ನಿಲ್ದಾಣದ ಉತ್ಕೃಷ್ಟತೆಗೆ ಮತ್ತು ಸ್ಥಿರವಾದ ಬದ್ಧತೆಗೆ ಮತ್ತೊಂದು ಗರಿಯಾಗಿದೆ. ಇದು ಉನ್ನತ-ಶ್ರೇಣಿಯ ವಾಯುಯಾನ ಕೇಂದ್ರವಾಗಿ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ವಿಮಾನ ನಿಲ್ದಾಣ ಆಡಳಿತ ಅಭಿಪ್ರಾಯಪಟ್ಟಿದೆ.

    ರಾಜ್ಯಾದ್ಯಂತ ಚುಮು ಚುಮು ಚಳಿ; ಹಲವೆಡೆ ಮಳೆ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts