ಜಪಾನ್ ಭೂಕಂಪಕ್ಕೆ ಎನ್​ಟಿಆರ್ ​ ಶಾಕ್!

ntr
Published on

ಟೋಕಿಯೋ: ಸರಣಿ ಭೂಕಂಪಗಳಿಂದ ಜಪಾನ್ ತತ್ತರಿಸಿ ಹೋಗಿರುವುದು ಗೊತ್ತೇ ಇದೆ. ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್​ಟಿಆರ್ ಸೋಮವಾರ ಸಂಭವಿಸಿದ ಭೂಕಂಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೂ ಎನ್​ಟಿಆರ್ ಕಳೆದ ವಾರ ಕುಟುಂಬ ಸಮೇತ ವಿಹಾರಕ್ಕೆಂದು ಜಪಾನ್ ಗೆ ತೆರಳಿದ್ದರು. ಅವರ ಸಹೋದರ ತಾರಕ್ ಸಹ ಒಂದು ವಾರ ಜಪಾನ್‌ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಜಪಾನ್​ಗೆ ತೆರಳಿದ್ದರು. ಎನ್​ಟಿಆರ್ ಪ್ರವಾಸ ಮುಗಿಸಿ ಸೋಮವಾರ ರಾತ್ರಿ ಹೈದರಾಬಾದ್ ತಲುಪಿದ್ದರು. ಏತನ್ಮಧ್ಯೆ, ಅಲ್ಲಿ ಸರಣಿ ಭೂಕಂಪಗಳು ಸಂಭವಿಸಿದೆ ಎಂದು ತಿಳಿದಾಗ ಎನ್‌ಟಿಆರ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನಾನು ಸೋಮವಾರವಷ್ಟೇ ಜಪಾನ್‌ನಿಂದ ಮನೆಗೆ ಮರಳಿದೆ. ಕಳೆದ ವಾರವೆಲ್ಲ ಅಲ್ಲಿಯೇ ಇದ್ದೆ. ಜಪಾನಿನಲ್ಲಿ ಭೂಕಂಪದ ಸುದ್ದಿ ಕೇಳಿ ಬೆಚ್ಚಿಬಿದ್ದೆ. ಆ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ನನ್ನ ಹೃದಯವನ್ನು ಘಾಸಿಗೊಳಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಾಕಿದ್ದಾರೆ.

ಅಲ್ಲಿನ ಜನರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗುತ್ತಿದೆ.

ಸದ್ಯ ಎನ್​ಟಿಆರ್ ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ಶೇ.80ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ದೇವರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವ ಸುಧಾ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net