More

    ನೋಯ್ಡಾದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಅರೆಸ್ಟ್​

    ನವದೆಹಲಿ: ನೋಯ್ಡಾದಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಮೂವರು ಶಂಕಿತರನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಪಕ್ಷ ನಾಯಕನ ಹತ್ಯೆಗೆ ಯತ್ನ, ಕುತ್ತಿಗೆಗೆ ಚಾಕು ಇರಿತ

    ಬಂಧಿತರನ್ನು ರಾಜ್‌ಕುಮಾರ್, ಆಜಾದ್ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ. ರವಿ ಮತ್ತು ಮೆಹ್ಮಿ ಎಂದು ಗುರುತಿಸಲಾದ ಇತರ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರಲ್ಲಿ ಸ್ಥಳೀಯ ಪ್ರಭಾವಿ ಎನಿಸಿಕೊಂಡಿರುವ ವ್ಯಕ್ತಿ ಸಹ ಒಬ್ಬನಿದ್ದು, ಇನ್ನೂ ಇಬ್ಬರು ಅತ್ಯಾಚಾರವೆಸಗಿದ ಬಳಿಕ ಪರಾರಿಯಾಗಿದ್ದಾರೆ. ಈ ಸಾಮೂಹಿಕ ಅತ್ಯಾಚಾರವು ಶಾಪಿಂಗ್ ಮಾಲ್ ಬಳಿ ನಡೆದಿತ್ತು. ಆರೋಪಿಗಳಿಂದ ಪದೇ ಪದೇ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಕಿರುಕುಳ ಹೆಚ್ಚಾದ್ದರಿಂದ ಡಿಸೆಂಬರ್ 30 ರಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಡಿ.30 ರಂದು ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಂತರ ತನಿಖೆಯನ್ನು ಕೈಗೆತ್ತಿಕೊಂಡು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದುಷ್ಕರ್ಮಿಗಳು “ದಬಾಂಗ್” (ಬಲಾಡ್ಯರು) ಎಂಬ ಕಾರಣದಿಂದಾಗಿ ಸಂತ್ರಸ್ತೆ ಘಟನೆ ನಡೆದ ಕೂಡಲೇ ದೂರು ನೀಡಿಲ್ಲ. ಆದಾಗ್ಯೂ, ಆರೋಪಿಗಳು ಮತ್ತೊಮ್ಮೆ ಬ್ಲ್ಯಾಕ್‌ಮೇಲ್ ಮಾಡಿದ ನಂತರ ಡಿಸೆಂಬರ್ 30 ರಂದು ಪೊಲೀಸರನ್ನು ಸಂಪರ್ಕಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.
    ಕಳೆದ ವಾರ ಆಕೆಯ ವೈದ್ಯಕೀಯ ಪರೀಕ್ಷೆಯ ನಂತರ ಕಾರ್ಯವಿಧಾನದ ಪ್ರಕಾರ ದೂರುದಾರರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಪಕ್ಷ ನಾಯಕನ ಹತ್ಯೆಗೆ ಯತ್ನ, ಕುತ್ತಿಗೆಗೆ ಚಾಕು ಇರಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts