ಶಾಹೀನ್​ ಅಫ್ರಿದಿಗೆ ತಕ್ಕ ಪಾಠ ಕಲಿಸಿದ ಟೀಮ್ ಇಂಡಿಯಾ ಆಟಗಾರ ಈತ! ಆಕಾಶ್​ ಚೋಪ್ರಾ ಗುಣಗಾನ | Shubman Gill

ವಿಜಯವಾಣಿ - 2025-02-25T171321.009
Published on

ನವದೆಹಲಿ: ಫೆ.23ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ರೋಹಿತ್ ಶರ್ಮ ಪಡೆ ಪಂದ್ಯವನ್ನು ಗೆದ್ದು ಬೀಗಿತು. ಪಾಕ್ ವಿರುದ್ಧ 6 ವಿಕೆಟ್​ ಜಯ ಸಾಧಿಸಿದ ಭಾರತಕ್ಕೆ ದೇಶವ್ಯಾಪಿ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತು.

ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್​​ಗಳಿಗೆ ನೀರು ಕುಡಿಸಿದ ಟೀಮ್ ಇಂಡಿಯಾ ಬ್ಯಾಟರ್​ಗಳ ಪೈಕಿ ದಾಖಲೆಗಳ ಸರದಾರ, ರನ್​ ಮಷಿನ್ ವಿರಾಟ್​ ಕೊಹ್ಲಿ ಶತಕದಾಟ ತೋರಿದರೆ, ಶುಭಮನ್​ ಗಿಲ್​ ತಮ್ಮ ಅದ್ಭುತ ಬ್ಯಾಟಿಂಗ್​​ ವೈಖರಿಯನ್ನು ತೋರಿದರು. 46 ರನ್​ಗಳಿಗೆ ಔಟ್​ ಆಗಿ ಪೆವಿಲಿಯನ್​ ಹಾದಿ ಹಿಡಿದಿದ್ದೇ ಆದರೂ ಗಿಲ್ ಬಾರಿಸಿದ ಕೆಲವು ಹೊಡೆತಗಳು ಕ್ರಿಕೆಟ್ ಪ್ರಿಯರ ಹುಬ್ಬೇರಿಸಿತು ಎಂಬುದರಲ್ಲಿ ಅನುಮಾನವೇ ಇಲ್ಲ. ದಿಗ್ಗಜ ಸಚಿನ್ ತೆಂಡೂಲ್ಕರ್​ರಂತೆ ಡ್ರೈವ್​ ಹೊಡೆದ ಶುಭಮನ್​ ಗಿಲ್​, ಮಾಜಿ ಕ್ರಿಕೆಟಿಗರ ಮೆಚ್ಚುಗೆಗೆ ಕಾರಣರಾದರು.

ಇದೇ ವಿಷಯವನ್ನು ಮುಂದಿಟ್ಟು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್​ ಚೋಪ್ರಾ, "ತನ್ನ ಮೊದಲ ಓವರ್​ನಲ್ಲೇ ಅಪಾಯಕಾರಿಯಾಗಿ ಕಾಣುತ್ತಿದ್ದ ಶಾಹೀನ್ ಅಫ್ರಿದಿ ಬೌಲಿಂಗ್​ ವಿರುದ್ಧ ಗಿಲ್ ಚುರುಕಾಗಿ ಬ್ಯಾಟಿಂಗ್ ಮಾಡಿದರು. ಆಫ್ರಿದಿ ಹಾಕಿದ ಎಸೆತಗಳಲ್ಲಿ ಕವರ್ ಡ್ರೈವ್ ಮತ್ತು ಸ್ಟ್ರೈಟ್ ಡ್ರೈವ್ ಆಡಿದ್ದು ಕಣ್ಣಿಗೆ ಹಬ್ಬದಂತಿತ್ತು. ಈ ಪಂದ್ಯದಲ್ಲಿ ಗಿಲ್ ಆಡುತ್ತಿದ್ದ ವೈಖರಿಯನ್ನು ನೋಡಿದ ನನಗೆ, ಅವರೇನೋ ಯಾವುದೇ ಪ್ರಾಕ್ಟಿಸ್​ ಸೆಷನ್​ನಲ್ಲಿ ಆಡಿದಂತೆ ಭಾಸವಾಯಿತು" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net